
ಹಿರೇಬಾಗೆವಾಡಿ: ರೈತರ ಪ್ರತಿ ಟನ್ ಕಬ್ಬಿಗೆ ₹3500 ದರ ನಿಗದಿ ಪಡಿಸಬೆಕೆಂದು ಆಗ್ರಹಿಸಿ ಇಲ್ಲಿನ ಬಸವ ವೃತ್ತದ ಬಳಿ ಹಿರೇಬಾಗೇವಾಡಿ, ಹಾಗೂ ಸುತ್ತಮುತ್ತಲಿನ ನೂರಾರು ರೈತರು ಮಂಗಳವಾರ 1 ಗಂಟೆಗೂ ಹೆಚ್ಚು ಕಾಲ ಬೆಳಗಾವಿ–ಸವದತ್ತಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು.
ಸಕ್ಕರೆ ಹೊರತು ಪಡಿಸಿ ಇತರೆ ಉತ್ಪನ್ನಗಳಿಂದ ಸಾಕಷ್ಟು ಲಾಭಗಳಿಸುತ್ತಿರುವ ಸಕ್ಕರೆ ಕಾರ್ಖಾನೆ ಮಾಲೀಕರು ರೈತರ ಕಬ್ಬಿಗೆ ಯೋಗ್ಯ ಬೆಲೆ ಯಾಕೆ ಕೊಡಬಾರದು? ದರ ನಿಗದಿಯಾಗದೇ ಹೋದರೆ ರಾಷ್ಟ್ರೀಯ ಹೆದ್ದಾರಿ ತಡೆದು ಉಗ್ರ ಹೋರಾಟ ಮಾಡಲಾಗುವುದೆಂದು ರೈತರು ಎಚ್ಚರಿಸಿದರು. ಬಳಿಕ ಉಪತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ರೈತ ಮುಖಂಡರಾದ ಬಸವರಾಜ ಮೊಕಾಶಿ, ಬಸವರಾಜ ಡೊಂಗರಗಾವಿ, ಈರಣ್ಣ ರೊಟ್ಟಿ, ಸುರೇಶ ಇಟಗಿ, ಶ್ರಿಕಾಂತ ಮಾಧುಬರಮಣ್ಣವರ, ಮೋಹನ ಅಂಗಡಿ, ಸಿದ್ದಪ್ಪ ಹುಕ್ಕೇರಿ, ಆನಂದಗೌಡ ಪಾಟೀಲ, ಸಂಜು ತಿಲಗರ, ವಿಜಯ ಮಠಪತಿ, ಮಂಜುನಾಥ ಧರೆಣ್ಣವರ, ಶಿವಪುತ್ರ
ಕಬ್ಬಿನ ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ಕೆಲ ರೈತರು ಉಪತಹಶೀಲ್ದಾರ್ ಕಚೇರಿ ಮುಂದೆ ಜಾನುವಾರಗಳನ್ನು ಕರೆ ತಂದು ಪ್ರತಿಭಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.