ಗೋಕಾಕ: ‘ಕಾಂಗ್ರೆಸ್ ನಾಯಕರು ಪಾಕ್ ಏಜೆಂಟರಂತೆ ವರ್ತಿಸುತ್ತಿದ್ದು, ಭಾರತದ ಸೈನಿಕರು ಮಾಡುವ ಪ್ರತಿಯೊಂದು ದಾಳಿಗೂ ಸಾಕ್ಷಿ ಕೇಳುತ್ತಿದ್ದು ಇದಕ್ಕೆ ಪ್ರತಿಯೊಬ್ಬ ನಾಗರಿಕ ಉತ್ತರ ಕೊಡುವ ಕಾಲ ಬರಲಿದೆ‘ ಎಂದು ಬಿಜೆಪಿ ರಾಷ್ಟ್ರೀಯ ಒಬಿಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಶಿ ಹೇಳಿದರು.
ಬುಧವಾರ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವೇಶ್ವರ ವೃತ್ತ (ಕೋರ್ಟ್ ಸರ್ಕಲ್) ವರೆಗೆ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದಿಂದ ಹಮ್ಮಿಕೊಳ್ಳಲಾದ ತಿರಂಗಾ ಯಾತ್ರೆಯಲ್ಲಿ ಮಾತನಾಡಿದರು.
ಆಪರೇಷನ್ ಸಿಂಧೂರ ಸೈನಿಕ ಕಾರ್ಯಾಚರಣೆ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಸೈನಿಕರ ಕುಟುಂಬಕ್ಕೆ ಆತ್ಮಬಲವನ್ನು ತುಂಬುವ ಉದ್ದೇಶದಿಂದ ಈ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ 200ಮೀ ಉದ್ದದ ತ್ರಿವರ್ಣ ಧ್ವಜವು ತಿರಂಗಾ ಯಾತ್ರೆಯಲ್ಲಿ ಮೆರಗು ತಂದಿತು.
ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಬಿಜೆಪಿ ಬೆಳಗಾವಿ ಗ್ರಾಮೀಣ ಅಧ್ಯಕ್ಷ ಸುಭಾಷ ಪಾಟೀಲ, ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಘಟಕ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಆರ್‌ಎಸ್‌ಎಸ್ʼನ ಮಲ್ಲಿಕಾರ್ಜುನ ಚುನಮರಿ, ಭೀಮಗೌಡ ಪೋಲಿಸಗೌಡರ, ಸುರೇಶ ಸನದಿ, ತುಕಾರಾಮ ಕಾಗಲ, ಮಡ್ಡೆಪ್ಪ ತೋಳಿನವರ, ಆನಂದ ಅತ್ತುಗೋಳ, ಮಂಜುನಾಥ ಪ್ರಭುನಟ್ಟಿ, ರಾಜೇಶ್ವರಿ ಒಡೆಯರ, ಸುರೇಶ ಪತ್ತಾರ, ಅಬ್ಬಾಸ ದೇಸಾಯಿ, ಪರಶುರಾಮ ಭಗತ, ಬಾಳೆಶ ತೋಟಗಿ, ಕುಸುಮಾ ಖನಗಾಂವಿ, ಅಡಿವೆಪ್ಪ ನಾವಲಗಟ್ಟಿ ಹಾಗೂ ಹಲವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.