ADVERTISEMENT

ಪಾಕಿಸ್ತಾನದ ಪರ ಘೋಷಣೆ; ಆರೋಪಿ ಗಡಿಪಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಜೂನ್ 2024, 15:00 IST
Last Updated 5 ಜೂನ್ 2024, 15:00 IST
ಹುಕ್ಕೇರಿಯಲ್ಲಿ ಶ್ರೀರಾಮ ಸೇನಾ ಕಾರ್ಯಕರ್ತರು ಉಪತಹಶೀಲ್ದಾರ್ ಅನಿತಾ ಚಿದಾನಂದ ಏಶಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು
ಹುಕ್ಕೇರಿಯಲ್ಲಿ ಶ್ರೀರಾಮ ಸೇನಾ ಕಾರ್ಯಕರ್ತರು ಉಪತಹಶೀಲ್ದಾರ್ ಅನಿತಾ ಚಿದಾನಂದ ಏಶಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು   

ಹುಕ್ಕೇರಿ: ಚಿಕ್ಕೋಡಿಯಲ್ಲಿ  ‘ಪಾಕಿಸ್ತಾನ ಜಿಂದಾಬಾದ್’ ಎಂದು ಕೂಗಿದವನಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಶ್ರೀರಾಮ ಸೇನಾದಿಂದ ಬುಧವಾರ ಉಪತಹಶೀಲ್ದಾರ್ ಅನಿತಾ ಚಿದಾನಂದ ಏಶಿ ಅವರಿಗೆ ಮನವಿ ಸಲ್ಲಿಸಲಾಯಿತು.

ಲೋಕಸಭಾ ಚುನಾವಣೆಯ ಮತ ಎಣಿಕೆ ನಂತರ ದೇಶದ್ರೋಹಿಯೊಬ್ಬ ಪಾಕ್‌ ಪರ ಘೋಷಣೆ ಕೂಗಿದ್ದ ಖಂಡನೀಯ. ಅವನನ್ನು ಗಡಿಪಾರು ಮಾಡಬೇಕು. ಇದನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಮುಖಂಡ ಶಿವರಾಜ ಅಂಬಾರಿ, ವಿವೇಕ ಪುರಾಣಿಕ, ಸುನೀಲ್ ಪೂಜಾರಿ, ರಾಹುಲ್ ಅಂಕಲೆ, ಶಿವರಾಜ ಅಂಬಾರಿ, ಶಬರಿ ಗೌಡ ಇದ್ದರು.

ADVERTISEMENT
ಹುಕ್ಕೇರಿಯಲ್ಲಿ ಶ್ರೀರಾಮ ಸೇನಾ ಘಟಕವು ಪಾಕಿಸ್ತಾನ ಜಿಂದಾಬಾದ್ ಕೂಗಿದವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಬುಧವಾರ ಶಿವರಾಜ ಅಂಬಾರಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.