ಹುಕ್ಕೇರಿ: ಸ್ಥಳೀಯ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ಮೂಲಕ ನ್ಯಾಯಾಲಯದಲ್ಲಿ ಬಾಕಿ ಇರುವ 342 ಪ್ರಕರಣಗಳನ್ನು ಇತ್ಯರ್ಥಗೊಳಿಸಿ ₹ 1.60 ಕೋಟಿ ಮೊತ್ತ ವಸೂಲಿ ಮಾಡಲಾಯಿತು.
ಸಿವಿಲ್ ನ್ಯಾಯಾಧೀಶ ಕೆ.ಎಸ್.ರೊಟ್ಟೇರ್ ಅವರು ಹಸಿರು ನಿಶಾನೆ ತೋರುವ ಮೂಲಕ ಅದಾಲತ್ತಿಗೆ ಚಾಲನೆ ನೀಡಿದರು. ದಾಂಪತ್ಯ ಕಲಹ ಪ್ರಕರಣದಲ್ಲಿ ರಾಜಿ ಸಂಧಾನ ಮೂಲಕ ಸಮಸ್ಯೆ ಬಗೆಹರಿಸಿ ದಂಪತಿಗಳನ್ನು ಒಂದು ಮಾಡಲಾಯಿತು.
ರಾಜ್ಯದ ಏಕೈಕ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಬಾಕಿ ವಿದ್ಯುತ್ ಬಿಲ್ ವಸೂಲಿಗೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಬಾಕಿ ಕೇಸುಗಳಲ್ಲಿ ಬರಬೇಕಾಗಿದ್ದ ₹ 10 ಕೋಟಿ ಬಾಕಿ ಪೈಕಿ 270 ಪ್ರಕರಣ ಇತ್ಯರ್ಥಗೊಳಿಸಿ ₹ 24 ಲಕ್ಷ ಹಣ ವಸೂಲಿ ಮಾಡಲಾಯಿತು ಎಂದು ರೆಸಿಡೆಂಟ್ ಎಂಜನಿಯರ್ ನೇಮಿನಾಥ ಖೆಮಲಾಪುರೆ ತಿಳಿಸಿದರು.
ಮ್ಯಾನೇಜರ್ ಡಿ.ಎಸ್.ನಾಯಿಕ, ಲೇಖಾಧಿಕಾರಿ ಎಸ್.ಎನ್. ಹಿರೇಮಠ, ಕಂಪ್ಯೂಟರ್ ವಿಭಾಗದ ಬಸವರಾಜ ವಾಜಂತ್ರಿ, ಭರತ ಮಲಗೌಡನವರ, ಸಂದೀಪ ಕುಲಕರ್ಣಿ, ಅಕ್ಕಿವಾಟೆ, ಪಾಟೀಲ್, ವಕೀಲರ ಸಂಘದ ಮಾಜಿ ಅಧ್ಯಕ್ಷ ರಾಜು ಚೌಗಲಾ, ಎಜಿಪಿ ಅನಿಲ್ ಕರೋಶಿ, ಕಾರ್ಯದರ್ಶಿ ಎಸ್.ಜಿ.ನದಾಫ್, ಅನಿತಾ ಕುಲಕರ್ಣಿ, ಹಿರಿಯ ವಕೀಲರಾದ ಕೆ.ಪಿ.ಶಿರಗಾಂವಕರ್, ಅಣ್ಣು ಶೆಟ್ಟಿ, ಚಂದರಗಿ, ಪಲ್ಲೇದ್, ಚೇತನ ಗಂಧ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.