
ಗೋಕಾಕ: ‘ವಿದ್ಯಾರ್ಥಿಗಳು ತರಬೇತಿ ಪೂರೈಸಿದ ಬಳಿಕವೂ ನಿರಂತರ ಅಭ್ಯಾಸ ಮುಂದುವರೆಸುವ ಹವ್ಯಾಸ ರೂಢಿಸಿಕೊಂಡರೆ ಭವಿಷ್ಯದಲ್ಲಿ ಸಾಧಕರಾಗಿ ಹೊರಹೊಮ್ಮಲು ಸಾಧ್ಯ’ ಎಂದು ಐ.ಸಿ.ಟಿ. ಅಕ್ಯಾಡೆಮಿ ಸಂಸ್ಥೆಯ ಮುಖ್ಯಸ್ಥ ಡಿ. ವಿಷ್ಣು ಪ್ರಸಾದ್ ಹೇಳಿದರು.
ಇಲ್ಲಿನ ಸಿದ್ದಲಿಂಗೇಶ್ವರ ಬಿ.ಸಿ.ಎ. ಮಹಾವಿದ್ಯಾಲಯದಲ್ಲಿ ಬಿ.ಸಿ.ಎ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಐ.ಸಿ.ಟಿ. ಅಕಾಡೆಮಿ ಸಂಸ್ಥೆ ಮತ್ತು ಐ.ಬಿ.ಎಂ. ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಕೌಶಲ ನಿರ್ಮಾಣ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
‘ವಿದ್ಯಾರ್ಥಿಗಳು 16 ತಾಸುಗಳ ಸ್ವಯಂ ಓದಿನ ಹವಾಸ್ಯ ಕರಗತ ಮಾಡಿಕೊಳ್ಳಬೇಕು. ನಮ್ಮ ಕಂಪನಿಯಿಂದ ತರಬೇತಿ ಪಡೆದುಕೊಂಡ ವಿದ್ಯಾರ್ಥಿಗಳನ್ನು ನಾವು ಮುಂದಿನ ಒಂದು ವರ್ಷಗಳ ಕಾಲ ಅವರಲ್ಲಿಯ ಕೌಶಲಗಳನ್ನು ಅಭಿವೃದ್ಧಿ ಪಡೆಸುವ ಕಾರ್ಯವನ್ನು ಐ.ಬಿ.ಎಂ. ಕಾರ್ಯಗತಗೊಳಿಸುತ್ತದೆ’ ಎಂದು ತಿಳಿಸಿದರು.
ಸಂಸ್ಥೆಯ ನಿರ್ದೇಶಕ ವಿಶ್ವನಾಥ ಶಿಂಧೋಳಿಮಠ ಮಾತನಾಡಿ, ‘ವಿದ್ಯಾರ್ಥಿಗಳು ಅಂಕ ಗಳಿಸುವುದಕ್ಕೆ ಸಿಮಿತವಾಗದೆ, ಸಮೂಹ ಸಂವಹನ ಕೌಶಲಗಳನ್ನು ಕಲಿಯಬೇಕು. ತಂತ್ರಜ್ಞಾನ ಯುಗದಲ್ಲಿ ಕಾಪಿ-ಪೇಸ್ಟ್ ಮಾಡದೆ ಸತ್ಯಾಸತ್ಯತೆ ದೃಢೀಕರಣ ಮಾಡಿಕೊಳ್ಳಬೇಕು’ ಎಂದರು.
‘ಒಂದು ಪದವಿ ಪಡೆದುಕೊಂಡರೆ ನಾವು ಎಲ್ಲವನ್ನು ಕಲಿತುಕೊಂಡಿದ್ದೇನೆ ಎಂಬ ಕಲ್ಪನೆ ಹೊಂದಿದರೆ ಸಾಲದು, ಜೀವನದಲ್ಲಿ ಕಲಿಯುವುದು ಬಹಳಷ್ಟಿದೆ ಎಂಬ ಸತ್ಯವನ್ನು ಅರಿತು ವಿದ್ಯಾರ್ಥಿಗಳು ಮುಂದೆ ಸಾಗಬೇಕು’ ಎಂದು ಹೇಳಿದರು.
ಸಂಸ್ಥೆಯ ಆಡಳಿತಾಧಿಕಾರಿ ಅಡಿವೇಶ ಗವಿಮಠ, ಐ.ಸಿ.ಟಿ. ಅಕಾಡೆಮಿ ಸಂಸ್ಥೆಯ ಪ್ರವೀಣ್ ಗಸ್ತಿ, ತರಬೇತಿದಾರ ಶಶಿಕಾಂತ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.