ADVERTISEMENT

ಬೆಳಗಾವಿ ಜಿಲ್ಲೆ ವಿಭಜನೆ ಪ್ರಸ್ತಾಪ ಬಂದರೆ ಸಹಮತ: ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 6:31 IST
Last Updated 11 ಡಿಸೆಂಬರ್ 2023, 6:31 IST
<div class="paragraphs"><p>ಡಿ.ಕೆ.ಶಿವಕುಮಾರ್‌</p></div>

ಡಿ.ಕೆ.ಶಿವಕುಮಾರ್‌

   

ಬೆಳಗಾವಿ: ‘ಬೆಳಗಾವಿ ಜಿಲ್ಲೆ ವಿಭಜನೆಗೆ ಸಂಬಂಧಿಸಿದಂತೆ ಸದನದಲ್ಲಿ ಪ್ರಸ್ತಾಪ ಬಂದರೆ ಖಂಡಿತವಾಗಿಯೂ ಸಕಾರಾತ್ಮಕ ಚರ್ಚೆ ನಡೆಸುತ್ತೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಸಮೀಪದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಜಿಲ್ಲೆ ವಿಭಜನೆ ಕುರಿತು ಮೇಲಿಂದ ಮೇಲೆ ಧ್ವನಿ ಕೇಳಿಬರುತ್ತಿದೆ. ಸದನದಲ್ಲಿ ಚರ್ಚಿಸೋಣ’ ಎಂದರು.

ADVERTISEMENT

‘ಸುವರ್ಣ ವಿಧಾನಸೌಧದಲ್ಲಿ ವೀರ ಸಾವರ್ಕರ್‌ ಫೋಟೊ ತೆರವು ಮಾಡುವ ಸಂಬಂಧ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಲು ನಿರಾಕರಸಿದ ಅವರು, ‘ಆ ಸಚಿವರ ಹತ್ತಿರವೇ ಮಾತನಾಡಿ. ಭಾವಚಿತ್ರ ಹಾಕುವುದು, ಬಿಡುವುದು ಸಭಾಧ್ಯಕ್ಷರ ವಿಚಾರಕ್ಕೆ ಬಿಟ್ಟಿದ್ದು’ ಎಂದರು.

‘ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಎಲ್ಲ ಸೇರಿ ನಮ್ಮದು ಸಮಗ್ರ ಕರ್ನಾಟಕ. ಈ ಭಾಗದ ಶಾಸಕರು ಉತ್ತರ ಕರ್ನಾಟಕ ವಿಷಯಗಳನ್ನು ಚರ್ಚೆಗೆ ಎತ್ತಿಕೊಂಡರೆ ಸರ್ಕಾರ ಸ್ಪಂದಿಸುತ್ತದೆ’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.