
ನಿಪ್ಪಾಣಿ: ‘ದೇಶಕ್ಕೆ ಸ್ವಾತಂತ್ರ್ಯ ಬಂದು ಶತಮಾನಗಳು ಪೂರೈಸುವುದರೊಳಗೆ ಭಾರತ ಪ್ರಪಂಚದ ಸೂಪರ್ ಪವರ್ ಆಗಲಿದ್ದು, ಅದಕ್ಕೆ ಸ್ಥಳೀಯ ತಂತ್ರಜ್ಞಾನ ಅತ್ಯಾವಶ್ಯಕ’ ಎಂದು ಸ್ಥಳೀಯ ವಿ.ಎಸ್.ಎಂ. ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಮಾಧವಿ ಅವಳೇಕರ ಅಭಿಪ್ರಾಯಪಟ್ಟರು.
ಕೆ.ಎಲ್.ಇ. ಸಂಸ್ಥೆಯ ಸ್ಥಳೀಯ ಜಿ.ಐ. ಬಾಗೇವಾಡಿ ಮಹಾವಿದ್ಯಾಲಯದ ವಿಜ್ಞಾನ ಸಂಘ ಮತ್ತು ಐ.ಕ್ಯೂ.ಎ.ಸಿ. ಸಂಯುಕ್ತ ಆಶ್ರಯದಲ್ಲಿ ಬುಧವಾರ 38ನೇ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ‘ವಿಕಸಿತ ಭಾರತಕ್ಕಾಗಿ ಸ್ಥಳೀಯ ತಂತ್ರಜ್ಞಾನ’ ಎಂಬ ವಿಷಯದ ಕುರಿತು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಂ.ಎಂ. ಹುರಳಿ ಮಾತನಾಡಿ, ‘ತಂತ್ರಜ್ಞಾನದ ಜೊತೆಗೆ ಸಮಯ ಪ್ರಜ್ಞೆ ಮತ್ತು ಶಿಸ್ತು ಅತ್ಯಾವಶ್ಯಕ ಮತ್ತು ಸ್ಥಳೀಯ ಮಟ್ಟದಲ್ಲಿ ತಂತ್ರಜಾನದ ಬೆಳವಣಿಗೆ ಆತ್ಮ ನಿರ್ಭರ್ ಭಾರತದ ಗುರಿ ತಲುಪಿಸುವಲ್ಲಿ ಯುವ ವಿದ್ಯಾರ್ಥಿಗಳಿಂದ ಸಾಧ್ಯ’ ಎಂದರು.
ಶಿವಲಿಂಗ ನಾಯಿಕ ಸ್ವಾಗತ ಗೀತೆ ಹಾಡಿದರು. ವಿಜ್ಞಾನ ಸಂಘದ ಸಂಯೋಜಕ ಜೆ.ಎನ್. ಮಗದುಮ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಉಪಪ್ರಾಚಾರ್ಯ ಡಾ. ಆರ್.ಜಿ. ಖರಾಬೆ, ಐ.ಕ್ಯೂ.ಎ.ಸಿ. ಸಂಯೋಜಕ ಡಾ. ಅತುಲಕುಮಾರ ಕಾಂಬಳೆ, ಡಾ.ಎಸ್.ಎಂ.ರಾಯಮಾನೆ, ಡಾ.ಬಸವರಾಜ ಜನಗೌಡ, ಸುರೇಶ ಶಿಂಗಟೆ, ಎನ್.ಎಸ್. ಬೆಳಗಾಂವಕರ, ನಿಖಿತಾ ಜಾಧವ, ಸಂಗೀತಾ ಮೊರೆ, ಆರ್. ಮೋನಿಕಾ, ಪ್ರಿಯಾಂಕಾ ಕೆಳಗಿನಮನಿ, ಮೊದಲಾದವರು ಉಪಸ್ಥಿತರಿದ್ದರು. ಅಮೃತಾ ಮಂಗಾವತೆ ಮತ್ತು ಸಂಪತಾ ಹೆಗಡೆ ನಿರೂಪಿಸಿದರು. ಪ್ರತಿಭಾ ಬಾಕಳೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.