ADVERTISEMENT

ಜಿಐಟಿ: ಸ್ವಾಗತ, ಪರಿಚಯ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 15:49 IST
Last Updated 16 ಡಿಸೆಂಬರ್ 2020, 15:49 IST
ಬೆಳಗಾವಿಯ ಕೆಎಲ್‌ಎಸ್ ಜಿಐಟಿಯಲ್ಲಿ ನಡೆದ ಪ್ರಥಮ ಬಿಇ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪರಿಚಯ ಕಾರ್ಯಕ್ರಮವನ್ನು ಡಾ.ಜಯಂತ ಕೆ. ಕಿತ್ತೂರ ಉದ್ಘಾಟಿಸಿದರು
ಬೆಳಗಾವಿಯ ಕೆಎಲ್‌ಎಸ್ ಜಿಐಟಿಯಲ್ಲಿ ನಡೆದ ಪ್ರಥಮ ಬಿಇ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪರಿಚಯ ಕಾರ್ಯಕ್ರಮವನ್ನು ಡಾ.ಜಯಂತ ಕೆ. ಕಿತ್ತೂರ ಉದ್ಘಾಟಿಸಿದರು   

ಬೆಳಗಾವಿ: ಇಲ್ಲಿನ ಕೆಎಲ್‌ಎಸ್‌ ಗೋಗಟೆ ತಾಂತ್ರಿಕ ಕಾಲೇಜಿನಲ್ಲಿ ಬಿ.ಇ. ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಸೌಲಭ್ಯಗಳ ಪರಿಚಯ ಕಾರ್ಯಕ್ರಮ ಸೋಮವಾರ ಆರಂಭಗೊಂಡಿದ್ದು, ಡಿ.19ರವರೆಗೆ ನಡೆಯಲಿದೆ.

ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಂಶುಪಾಲ ಡಾ.ಜಯಂತ ಕೆ. ಕಿತ್ತೂರ ಕಾಲೇಜಿನ ಮೂಲಸೌಲಭ್ಯಗಳು, ಶೈಕ್ಷಣಿಕ ಸ್ಥಿತಿ, ಸಾಧನೆಗಳು, ಸೌಲಭ್ಯಗಳು ಮತ್ತು ಉತ್ತಮ ವಿಧಾನಗಳ ಬಗ್ಗೆ ಪರಿಚಯ ನೀಡಿದರು. ವಿವಿಧ ವಿಭಾಗಗಳ ಬಗ್ಗೆ ಮುಖ್ಯಸ್ಥರು ಮಾಹಿತಿ ನೀಡಿದರು. ವಿವಿಧ ಉದ್ಯೋಗ ಅವಕಾಶಗಳು ಹಾಗೂ ಮುಂದಿನ ಯೋಜನೆಯನ್ನು ತರಬೇತಿ ಹಾಗೂ ಉದ್ಯೋಗ ಅಧಿಕಾರಿ ಪ್ರೊ.ಸತೀಶ್ ಹುಕ್ಕೇರಿ ವಿವರಿಸಿದರು.

ಅಕಾಡೆಮಿಕ್ ಡೀನ್ ಡಾ.ಎಂ.ಎಸ್. ಪಾಟೀಲ, ಪ್ರಥಮ ವರ್ಷದ ಸಂಯೋಜಕ ಡಾ.ಎಂ.ಕೆ. ರೆಂದಾಳೆ, ವಿವಿಧ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.