ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ
ಬೆಳಗಾವಿ: ನಗರದ ವಿವಿಧೆಡೆ ನಾಲ್ವರು ಉದ್ಯಮಿಗಳ ಮನೆಗಳ ಮೇಲೆ ಐಟಿ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ, ತಪಾಸಣೆ ಶುರುಮಾಡಿದ್ದಾರೆ.
ಗೋವಾ, ಬೆಂಗಳೂರು ಅಧಿಕಾರಿಗಳು ಈ ದಾಳಿ ತಂಡದಲ್ಲಿದ್ದಾರೆ.
ಎರಡು ಸಕ್ಕರೆ ಕಾರ್ಖಾನೆ, ಐರಾನ್ ಹಾಗೂ ಗ್ರೈನೆಟ್ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರ ಉತ್ಪನ್ನಗಳು ವಿದೇಶಗಳಿಗೂ ರಪ್ತಾಗುತ್ತವೆ.
ಬೆಳಿಗ್ಗೆಯಿಂದಲೇ ಅಧಿಕಾರಿಗಳ ತಂಡ ದಾಖಲೆಗಳು, ಆಸ್ತಿಪಾಸ್ತಿ ಪರಿಶೀಲನೆ ಶುರು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.