ADVERTISEMENT

ಜೈನರ ಆಚರಣೆಗಳು ಸಮಾಜಕ್ಕೆ ಮಾದರಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 2:49 IST
Last Updated 1 ಸೆಪ್ಟೆಂಬರ್ 2025, 2:49 IST
ಬೆಳಗಾವಿ ತಾಲ್ಲೂಕಿನ ಹಲಗಾ ಗ್ರಾಮದ ಜೈನ ಬಸದಿಯಲ್ಲಿ‌ ಭಾನುವಾರ ನಡೆದ ಪರ್ಯುಷಣ ಪರ್ವ ದಶಲಕ್ಷಣ ನೋಂಪಿ, ಪಂಚಮೇರು ನೋಂಪಿ, ಆಕಾಶ ಪಂಚಮಿ ನೋಂಪಿ ಮತ್ತು ಪುಷ್ಪಾಂಜಲಿ‌ ನೋಂಪಿ ಕಾರ್ಯಕ್ರಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪಾಲ್ಗೊಂಡರು
ಬೆಳಗಾವಿ ತಾಲ್ಲೂಕಿನ ಹಲಗಾ ಗ್ರಾಮದ ಜೈನ ಬಸದಿಯಲ್ಲಿ‌ ಭಾನುವಾರ ನಡೆದ ಪರ್ಯುಷಣ ಪರ್ವ ದಶಲಕ್ಷಣ ನೋಂಪಿ, ಪಂಚಮೇರು ನೋಂಪಿ, ಆಕಾಶ ಪಂಚಮಿ ನೋಂಪಿ ಮತ್ತು ಪುಷ್ಪಾಂಜಲಿ‌ ನೋಂಪಿ ಕಾರ್ಯಕ್ರಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪಾಲ್ಗೊಂಡರು   

ಬೆಳಗಾವಿ: ‘ಅಂಹಿಸಾ ಪರಮೋ ಧರ್ಮಃ ಎನ್ನುವ ನಂಬಿಕೆಯನ್ನಿಟ್ಟುಕೊಂಡ ಜೈನ ಧರ್ಮದ ಆಚರಣೆಗಳು ವಿಶಿಷ್ಟವಾಗಿವೆ. ಸಮಾಜಕ್ಕೆ ಮಾದರಿಯಾಗಿವೆ. ಜೈನರು ಶಾಂತಿಪ್ರಿಯರು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. 

ತಾಲ್ಲೂಕಿನ ಹಲಗಾ ಗ್ರಾಮದ ಜೈನ ಬಸದಿಯಲ್ಲಿ‌ ಭಾನುವಾರ ನಡೆದ ಪರ್ಯುಷಣ ಪರ್ವ ದಶಲಕ್ಷಣ ನೋಂಪಿ, ಪಂಚಮೇರು ನೋಂಪಿ, ಆಕಾಶ ಪಂಚಮಿ ನೋಂಪಿ ಮತ್ತು ಪುಷ್ಪಾಂಜಲಿ‌ ನೋಂಪಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಧರ್ಮ, ಸಂಪ್ರದಾಯ, ಧಾರ್ಮಿಕ ಮುಖಂಡರು, ಧಾರ್ಮಿಕ ಆಚರಣೆಗಳಿಂದಾಗಿ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಿದೆ. ನಮ್ಮ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲ ಮುನ್ನಡೆಯುವುದರಿಂದ ಮುಂದಿನ ಪೀಳಿಗೆ ಸಹ ನೆಮ್ಮದಿಯ ಬದುಕು ಕಾಣಲು ಸಾಧ್ಯ. ನಿಮ್ಮೆಲ್ಲರ ಸಹಕಾರ, ಆಶಿರ್ವಾದದಿಂದ ನಾನು ರಾಜ್ಯದ ಮಂತ್ರಿಯಾಗಿ ಸೇವೆ ಸಲ್ಲಿಸಲು ಅವಕಾಶವಾಗಿದೆ. ಮುಂದಿನ ದಿನಗಳಲ್ಲಿ ಸಹ ಎಲ್ಲರೂ ಪರಸ್ಪರ ಸಹಕಾರದಿಂದ ಮುನ್ನಡೆಯೋಣ’ ಎಂದು ಹೇಳಿದರು.

ADVERTISEMENT

ಮುಖಂಡರಾದ ಮಹಾವೀರ ಪಾಟೀಲ, ಸಂತೋಷ ಕೆಂಗಲಗೌಡ, ಸುಕುಮಾರ ಹುಡೇದ, ಬಾಬು ದೇಸಾಯಿ, ಧನುಕುಮಾರ ದೇಸಾಯಿ, ಸಂತೋಷ ಪಾಟೀಲ, ಶ್ರೀಪಾಲ್ ಕೆಂಗಲಗೌಡ, ಶಾಂತು ಬೆಲ್ಲದ, ಮಹಾವೀರ ಬೆಲ್ಲದ, ಭರತೇಶ್ ಬೆಲ್ಲದ, ಮಹಾವೀರ ಅಲಾರವಾಡ, ಅಣ್ಣಾಸಾಹೇಬ್ ದೇಸಾಯಿ, ಜೈನ ಸಮಾಜ ಮತ್ತು ಶ್ರೀ 1008 ಪಾರ್ಶ್ವನಾಥ ಕಮಿಟಿಯ ಸದಸ್ಯರು ಇದ್ದರು. 

ತಾರಿಹಾಳ ಉತ್ಸವ: ‘ಶ್ರಾವಣ ಮಾಸದ ನಿಮಿತ್ತ ಲೋಕ ಕಲ್ಯಾಣಾರ್ಥ, ಭಕ್ತರ ಹಿತಕ್ಕಾಗಿ ಉತ್ತರಾಖಂಡ ರಾಜ್ಯದ ದೇವಭೂಮಿ ಹಿಮಾಲಯದಲ್ಲಿ  ಪೂಜ್ಯ ಅಡವೀಶ್ವರ ದೇವರು ಒಂದು ತಿಂಗಳ ಮೌನ ಅನುಷ್ಠಾನ ಕೈಗೊಂಡ ಪ್ರಯುಕ್ತ ಕೆಲವು ದಿನಗಳ ಕಾಲ ಪ್ರವಚನ ಹಾಗೂ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂತಹ ಭಕ್ತಿಪೂರ್ಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನನ್ನ ಭಾಗ್ಯ’ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಬೆಳಗಾವಿ ತಾಲ್ಲೂಕಿನ ತಾರಿಹಾಳ ಗ್ರಾಮದ ಅಡವಿ ಸಿದ್ದೇಶ್ವರ ಮಠದಲ್ಲಿ ಶನಿವಾರ ನಡೆದ ತಾರಿಹಾಳ ಉತ್ಸವ–2025ರ ಮೌನ ಅನುಷ್ಠಾನ ಸಮಾರಂಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಪೂಜ್ಯರು ಸನ್ಮಾನಿಸಿದರು 

ತಾಲ್ಲೂಕಿನ ತಾರಿಹಾಳ ಗ್ರಾಮದ ಅಡವಿ ಸಿದ್ದೇಶ್ವರ ಮಠದಲ್ಲಿ ಶನಿವಾರ ಸಂಜೆ ತಾರಿಹಾಳ ಉತ್ಸವ–2025ರ ಮೌನ ಅನುಷ್ಠಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮುರುಘೇಂದ್ರ ಸ್ವಾಮಿಗಳು, ಮುನವಳ್ಳಿ ಸೋಮಶೇಖರ ಮಠದ ಪ್ರಭುನೀಲಕಂಠ ಸ್ವಾಮಿಗಳು, ಮೈಸೂರಿನ ನಿರಂಜನ ದೇವರು, ಕಲಬುರ್ಗಿ ಮೇಳಕುಂದಾದ ಶಶಿಕುಮಾರ್ ದೇವರು, ನಿರುಪಾದಿ ದೇವರು, ಗುಳೇದಗುಡ್ಡದ ರೇವಣಸಿದ್ಧೇಶ್ವರ ದೇವರು, ಬೈಲವಾಡದ ಶಂಕರಲಿಂಗ ದೇವರು, ಗದಗದ ವೇದಮೂರ್ತಿ ಸದಾನಂದ ಶಾಸ್ತ್ರೀಜಿ, ಸೋಮನಾಳದ ಶರಣಬಸವ ಕೆ. ಹಿರೇಮಠ, ಪಂಚಾಕ್ಷರಿ ಹೂಗಾರ ಇತರರು ವೇದಿಕೆ ಮೇಲಿದ್ದರು.

ಸಂಸ್ಕೃತಿ ಪರಂಪರೆ ಹಾಗೂ ಸಾಧು ಸಂತರಿಂದಾಗಿ ನಮ್ಮ ಭೂಮಿ ಅತ್ಯಂತ ಪವಿತ್ರವಾಗಿದೆ. ಇಂತಹ ನೆಲದಲ್ಲಿ ಬದುಕಿ ಬಾಳುವುದೇ ನಮ್ಮ ಪುಣ್ಯ
ಲಕ್ಷ್ಮೀ ಹೆಬ್ಬಾಳಕರ ಸಚಿವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.