ಹುಕ್ಕೇರಿ: ಈಚೆಗೆ ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಕತ್ತಿ ಮಹಾವಿದ್ಯಾಲಯದಲ್ಲಿ ಜರುಗಿದ ಉದ್ಯೋಗ ಮೇಳದಲ್ಲಿ ಪಾಲ್ಗೊಂಡ 1,200 ನಿರುದ್ಯೋಗಿಗಳ ಪೈಕಿ 400 ಜನರಿಗೆ ವಿವಿಧ ಕಂಪನಿಗಳು ಉದ್ಯೋಗದ ಆದೇಶ ಪತ್ರ ನೀಡಿವೆ ಎಂದು ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ್ ಕತ್ತಿ ಹೇಳಿದರು.
ಶುಕ್ರವಾರ ವರದಿಗಾರರ ಜತೆ ಮಾತನಅಡಿದ ಅವರು ಗ್ರಾಮೀಣ ಭಾಗದ ಜನರಿಗೆ ಅವಕಾಶ ಸಿಗಲಿ ಎಂದು ಉದ್ಯೋಗ ಮೇಳವನ್ನು ನಮ್ಮ ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು ಎಂದರು.
ಉದ್ಘಾಟನೆ: ವಿದ್ಯಾರ್ಥಿಗಳು ಶೈಕ್ಷಣಿಕ ಜ್ಞಾನ, ಕೌಶಲ್ಯ ಮತ್ತು ಆತ್ಮವಿಶ್ವಾಸ ಬಳಸಿಕೊಂಡು ದೊರೆತ ಅವಕಾಶ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮೇಳಗಳು ವಿದ್ಯಾರ್ಥಿಗಳಲ್ಲಿ ಉದ್ಯೋಗ ಮನೋಭಾವನೆ ಬೆಳೆಸುವುದರ ಜೊತೆಗೆ ಸ್ವಾವಲಂಬನೆ ಮತ್ತು ಭವಿಷ್ಯದ ಬಗ್ಗೆ ವಿಶ್ವಾಸ ಮೂಡಿಸುತ್ತವೆ ಎಂದು ಮಹಾಂತೇಶ್ವರ ವಿದ್ಯಾ ಟ್ರಸ್ಟ್ ಉಪಾಧ್ಯಕ್ಷ ಸುಜೀತ್ ಕತ್ತಿ ಹೇಳಿದರು.
ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ಮಹಾಂತೇಶ್ವರ ವಿದ್ಯಾ ಟ್ರಸ್ಟ್, ವಿಶ್ವನಾಥ ಮಲ್ಲಪ್ಪ ಕತ್ತಿ ಸ್ಮಾರಕ ಧರ್ಮಾರ್ಥ ಟ್ರಸ್ಟ್, ರಾಜೇಶ್ವರಿ ವಿಶ್ವನಾಥ ಕತ್ತಿ ಚಾರಿಟೇಬಲ್ ಟ್ರಸ್ಟ್ ಹಾಗೂ ಜಿಲ್ಲಾ ಉದ್ಯೋಗ ಮಿನಿಮಯ ಕೇಂದ್ರ ಸಹಯೋಗದಲ್ಲಿ ಈಚೆಗೆ ಜರುಗಿದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದರು.
ಹಿರಿಯ ಸಹಕಾರಿ, ಘಟಪ್ರಭಾ ಜೆ.ಜಿ.ಸಹಕಾರಿ ಆಸ್ಪತ್ರೆ ನಿರ್ದೇಶಕ ಆರ್.ಟಿ. ಶಿರಾಳಕರ ಉದ್ಯೋಗ ಮೇಳ ಉದ್ಘಾಟಿಸಿದರು.ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿ.ಎಸ್.ಹೂಗಾರ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಜೊತಗೆ ಉತ್ತಮ ಉದ್ಯೋಗ ಅವಕಾಶ ಅಗತ್ಯ. ವಿದ್ಯಾರ್ಥಿಗಳ ಕನಸು ನನಸಾಗಿಸಲು ಸೂಕ್ತ ವೇದಿಕೆ ಒದಗಿಸುವುದು ಟ್ರಸ್ಟ್ ಮುಖ ಉದ್ದೇಶ ಎಂದರು. ವಿದ್ಯಾರ್ಥಿಗಳು ಮಾನವ ಸಂಪನ್ಮೂಲಗಳಾಗಿ ಉಪಯೋಗಕ್ಕೆ ಬರುವಂತೆ ಸಲಹೆ ನೀಡಿದರು.
ಪಿಯು ಕಾಲೇಜು ಪ್ರಾಚಾರ್ಯ ಎಸ್.ಎಂ.ಭಂಗಿ, ಆಡಳಿತಾಧಿಕಾರಿ ಕೆ.ಸಿ.ಮುಚಖಂಡಿ, ವಿ.ಡಿ.ತೋರೋ, ಎಸ್.ಟಿ.ಬೆಳ್ಳಿಕಟ್ಟಿ, ಎನ್.ಎಸ್. ಪತ್ತಾರ, ಸಂತೋಷ ಎನ್, ಡಾ.ಉಮೇಶ್ ಪಾಟೀಲ್. ಆರ್.ಕೆ. ಪಾಟೀಲ ಹಾಗೂ ಬೇರೆ ಬೇರೆ ಕಂಪನಿಯ ಎಚ್.ಆರ್.ಗಳು, ಉದ್ಯೋಗಾಕಾಂಕ್ಷಿಗಳು, ಕಾಲೇಜು ಇದ್ದರು.
ಪ್ರಾಚಾರ್ಯ ಎಸ್.ಎಂ.ಭಂಗಿ ಸ್ವಾಗತಿಸಿದರು. ಪೂಜಾ ಹುನ್ನೂರ ನಿರೂಪಿಸಿದರು. ನಿರ್ಮಲಾ ರಂಗಾಪೂರೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.