
ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಜಿಲ್ಲೆಯ 11 ಜನ ಮಾಧ್ಯಮ ಪ್ರತಿನಿಧಿಗಳಿಗೆ ಜಿಲ್ಲಾಡಳಿತದ ವತಿಯಿಂದ ನ.1ರಂದು ಬೆಳಿಗ್ಗೆ 9.30ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಸನ್ಮಾನಿಸಲಾಗುವುದು.
ಹಿರಿಯ ಪತ್ರಕರ್ತರಾದ ಮಂಜುನಾಥ ಕೋಳಿಗುಡ್ಡ, ಸದಾನಂದ ಮಜತಿ, ಸಹದೇವ ಮಾನೆ, ಅನಿಲ್ ಕಾಜಗಾರ, ಛಾಯಾಗ್ರಾಹಕರಾದ ವೀರನಗೌಡ ಇನಾಮತಿ, ಪ್ರವೀಣ ಶಿಂಧೆ, ರವಿ ಭೋವಿ, ಸಂಪಾದಕ ಹಿರೋಜಿ ಮಾವರಕರ, ವರದಿಗಾರರಾದ ಸಂಜೀವ ಕಾಂಬಳೆ, ಗಜಾನನ ರಾಮನಕಟ್ಟಿ, ಪತ್ರಿಕಾ ವಿತರಕ ಶಂಕರ ಸುತಗಟ್ಟಿ ಅವರು ಪ್ರಶಸ್ತಿಗೆ ಪಾತ್ರವಾಗಿದ್ದಾರೆ.
ಜತೆಗೆ ಕಲೆ, ಸಾಹಿತ್ಯ, ಸಮಾಜ ಸೇವೆ, ಶೈಕ್ಷಣಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಜಿಲ್ಲೆಯ ಸಾಧಕರಿಗೆ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಗುವುದು.
ಕಲೆ ವಿಭಾಗದಲ್ಲಿ ಈಶ್ವರಚಂದ್ರ ಎಸ್.ಬೆಟಗೇರಿ, ಜಿತೇಂದ್ರ ಸಾಬಣ್ಣವರ, ಎಂ.ಗಂಗಾಧರ ರಾವ್, ಶಿವಣಪ್ಪ ಚಂದರಗಿ, ಕ್ಷ್ಮೀ ತಿರ್ಲಾಪುರ, ಗಣಪತಿ ಮೊಪಗಾರ, ಬಾಲಪ್ಪ ಗಸ್ತಿ, ಸುಶೀಲಾ ಹೆಗಡಿ, ನರಸಪ್ಪಾ ಪರಸಪ್ಪ ಶಿರಗುಪ್ಪಿ, ಸಾಹಿತ್ಯ, ಸಮಾಜ ಸೇವೆ ವಿಭಾಗದಲ್ಲಿ ಹೇಮಾವತಿ ಸೊನೊಳ್ಳಿ, ವಿಜಯಲಕ್ಷ್ಮೀ ತೀರ್ಲಾಪುರ, ಶಾಯಿನ ಸಯ್ಯದ್, ಅಖಿಲಾ ಅಯ್ಯಬಖಾನ್ ಪಠಾಣ, ಮಹಾದೇವ ಬಿರಾದಾರ, ದೀಪಕ ಮುಂಗರವಾಡಿ, ರೂಪಾ ಹಿರೇಮಠ, ವೇದಮೂರ್ತಿ ಆರಾದ್ರಿಮಠ, ಶೈಕ್ಷಣಕ ಹಾಗೂ ವೈದ್ಯಕೀಯ ವಿಭಾಗದಲ್ಲಿ ಈರಪ್ಪ ಹಳಿಗೌಡ್ರ, ಪ್ರಭಾ ಬೋರಗಾಂವಕರ, ಅಲ್ಲಯ್ಯ ಹಿರೇಮಠ, ಮಹಾಂತೇಶ ರಾಮಣ್ಣವರ, ಡಾ.ಮನೋಜ ಸುತಾರ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.