ADVERTISEMENT

ಬೆಳಗಾವಿ: ಜೋಯಾಲುಕ್ಕಾಸ್‌ ಮಳಿಗೆ ಉದ್ಘಾಟಿಸಿದ ಸಂಸದೆ ಮಂಗಲಾ ಅಂಗಡಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 3:06 IST
Last Updated 27 ನವೆಂಬರ್ 2022, 3:06 IST
ಬೆಳಗಾವಿಯ ಖಡೇಬಜಾರ್‌ನಲ್ಲಿ ತೆರೆದ ಜೋಯಾಲುಕ್ಕಾಸ್‌ ಮಳಿಗೆಯನ್ನು ಸಂಸದೆ ಮಂಗಲಾ ಅಂಗಡಿ ಶನಿವಾರ ಉದ್ಘಾಟಿಸಿದರು. ರಾಜೇಶ್‌ ಕೃಷ್ಣನ್‌, ಪ್ರದೀಪ ಕೆ.ಕೆ., ಸಚಿನ್, ದಿನೇಶ ವಿ.ಎಸ್. ಹಾಗೂ ಮಳಿಗೆ ಸಿಬ್ಬಂದಿ ಇದ್ದಾರೆ
ಬೆಳಗಾವಿಯ ಖಡೇಬಜಾರ್‌ನಲ್ಲಿ ತೆರೆದ ಜೋಯಾಲುಕ್ಕಾಸ್‌ ಮಳಿಗೆಯನ್ನು ಸಂಸದೆ ಮಂಗಲಾ ಅಂಗಡಿ ಶನಿವಾರ ಉದ್ಘಾಟಿಸಿದರು. ರಾಜೇಶ್‌ ಕೃಷ್ಣನ್‌, ಪ್ರದೀಪ ಕೆ.ಕೆ., ಸಚಿನ್, ದಿನೇಶ ವಿ.ಎಸ್. ಹಾಗೂ ಮಳಿಗೆ ಸಿಬ್ಬಂದಿ ಇದ್ದಾರೆ   

ಬೆಳಗಾವಿ: ಇಲ್ಲಿನ ಖಡೇಬಜಾರ್‌ನಲ್ಲಿ ಹೊಸದಾಗಿ ತೆರೆದ ಜೋಯಾಲುಕ್ಕಾಸ್‌ ಆಭರಣಗಳ ಮಳಿಗೆಯನ್ನು ಸಂಸದೆ ಮಂಗಲಾ ಅಂಗಡಿ ಅವರು ಶನಿವಾರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ‘ವಿಶ್ವಮಟ್ಟದಲ್ಲಿ ಹೆಸರು ಮಾಡಿದ ಜೋಯಾಲುಕ್ಕಾಸ್‌ ಮಳಿಗೆ ಬೆಳಗಾವಿಯಂಥ ಸ್ಮಾರ್ಟ್‌ಸಿಟಿಯಲ್ಲಿ ಆರಂಭವಾಗಿದ್ದು ಖುಷಿ ತಂದಿದೆ. ಚಿನ್ನಾಭರಣ ಪ್ರಿಯರಾದ ಇಲ್ಲಿನ ಜನರಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದರು.

ಜೋಯಾಲುಕ್ಕಾಸ್‌ ಗ್ರಾಹಕರಿಗೆ ಬೇಕಾದ ಎಲ್ಲ ರೀತಿಯ ಆಭರಣಗಳನ್ನೂ ನೀಡುತ್ತದೆ. ಬೆಳಗಾವಿಯಲ್ಲಿ ವಿಶಾಲವಾದ ಮಳಿಗೆ ತೆರೆದಿದ್ದೇವೆ. ಪೌರಾಣಿಕ ಶೈಲಿಯ ವಿನ್ಯಾಸಗಳಿಂದ ಹಿಡಿದು ಆಧುನಿಕ ಪ್ರಪಂಚದ ಸೊಗಸಾದ ವಿನ್ಯಾಗಳೂ ಇಲ್ಲಿ ಲಭ್ಯ ಇವೆ. ಗ್ರಾಹಕಪ್ರಿಯ ಶೋರೂಮ್‌, ಪ್ರೀಮಿಯಂ ಸೌಕರ್ಯ ಕೊಡಮಾಡಿದ್ದೇವೆ. ವಿಶಾಲ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮಳಿಗೆಯ ಮಾರುಕಟ್ಟೆ ಮುಖ್ಯಸ್ಥರು ಮಾಹಿತಿ ನೀಡಿದರು.

ADVERTISEMENT

ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸಿದ್ಧ‍ಪಡಿಸಿದ ವಜ್ರಾಭರಣಗಳ ಮೇಲೆ ಶೇ 25ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಪ್ರತಿ ಖರೀದಿಯ ಮೇಲೂ ಉಚಿತ ಕೊಡುಗೆ ನೀಡಿ ಪ್ರೋತ್ಸಾಹಿಸಲಾಗುತ್ತದೆ. ಅಲ್ಲದೇ ನವೆಂಬರ್‌ 28ರವರೆಗೆ ಗ್ರಾಹಕರಿಗೆ ವಿವಿಧ ‘ಆಫರ್‌’ಗಳನ್ನೂ ನೀಡಲಾಗಿದೆ ಎಂದರು.

ಗ್ರಾಹಕರಿಗೆ ವಿಶ್ವಾಸಾರ್ಹ ಹಾಗೂ ಗುಣಮಟ್ಟದ ಆಭರಣ ನೀಡುವುದು ನಮ್ಮ ಉದ್ದೇಶ. ಬೆಳಗಾವಿ ಜನರ ಅಭಿರುಚಿಗೆ ತಕ್ಕಂತೆ ಇಲ್ಲಿ ವಿನ್ಯಾಸಗಳನ್ನು ತರಲಾಗಿದೆ ಎಂದು ವಿವರಿಸಿದರು.

ಜೋಯಾಲುಕ್ಕಾಸ್‌ನ ಅಖಿಲ ಭಾರತ ರಿಟೇಲ್‌ ವಿಭಾಗದ ಮುಖ್ಯಸ್ಥ ರಾಜೇಶ್‌ ಕೃಷ್ಣನ್‌, ಸ್ಟೋರ್‌ ಮ್ಯಾನೇಜರ್‌ ಪ್ರದೀಪ ಕೆ.ಕೆ., ಅಸಿಸ್ಟಂಟ್‌ ಮ್ಯಾನೇಜರ್‌ ಸಚಿನ್, ಕರ್ನಾಟಕ ಮಾರ್ಕೆಟಿಂಗ್‌ ಮ್ಯಾನೇಜರ್‌ ದಿನೇಶ ವಿ.ಎಸ್. ಹಾಗೂ ಮಳಿಗೆ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.