ADVERTISEMENT

ಕಾವ್ಯ ಲೋಕಕ್ಕೆ ಶರಣರ ಕೊಡುಗೆ ಅಪಾರ: ಮಹಾನಂದಾ ಪಾಟೀಲ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 16:20 IST
Last Updated 29 ಜುಲೈ 2024, 16:20 IST
ಗೋಕಾಕ ತಾಲ್ಲೂಕಿನ ಅಂಕಲಗಿಯಲ್ಲಿಜರುಗಿದ 7ನೇ ಗೋಕಾಕ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಂಸ್ಕೃತಿಕ ಚಿಂತನಗೋಷ್ಠಿಯಲ್ಲಿ ಮಹಾನಂದಾ ಪಾಟೀಲ ಮಾತನಾಡಿದರು
ಗೋಕಾಕ ತಾಲ್ಲೂಕಿನ ಅಂಕಲಗಿಯಲ್ಲಿಜರುಗಿದ 7ನೇ ಗೋಕಾಕ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಂಸ್ಕೃತಿಕ ಚಿಂತನಗೋಷ್ಠಿಯಲ್ಲಿ ಮಹಾನಂದಾ ಪಾಟೀಲ ಮಾತನಾಡಿದರು    

ಗೋಕಾಕ: ಬಸವರಾಜ ಕಟ್ಟೀಮನಿ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು, ಕುಂದರನಾಡು ಸ್ವಾತಂತ್ರ್ಯ ಸಮರ ಹಾಗೂ ಸಾಹಿತ್ಯದಲ್ಲಿ ತನ್ನದೆಯಾದ ವಿಶೇಷ ಕೊಡುಗೆ ನೀಡಿದೆ ಎಂದು ಸಾಹಿತಿ ಮಹಾನಂದಾ ಪಾಟೀಲ ಹೇಳಿದರು.

ತಾಲ್ಲೂಕಿನ ಅಂಕಲಗಿಯಲ್ಲಿ ನಿರ್ಮಿಸಿದ್ದ ಬಸವರಾಜ ಕಟ್ಟೀಮನಿ ವೇದಿಕೆಯಲ್ಲಿ ಭಾನುವಾರ ಜರುಗಿದ ಗೋಕಾಕ ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಂಸ್ಕೃತಿಕ ಚಿಂತನಗೋಷ್ಠಿ ಕಾರ್ಯಕ್ರಮದಲ್ಲಿ ‘ಗೋಕಾಕ ತಾಲ್ಲೂಕಿನಲ್ಲಿ ಸ್ವಾತಂತ್ರ್ಯ ಸಮರ’ ಕುರಿತು ಮಾತನಾಡಿದರು.

ರಾಮಕೃಷ್ಣ ಮರಾಠೆ, ಆನಂದಕುಮಾರ ಜಕ್ಕನ್ನವರ, ಪ್ರೊ.ಸುರೇಶ ಮುದ್ದಾರ, ಪ್ರಕಾಶ ಗಿರಿಮಲ್ಲನ್ನವರ, ಪಿ.ಎಲ್. ಹೊಂಬಳ, ಎಂ.ಎ.ಮರಲಿಂಗನವರ ಇದ್ದರು.

ADVERTISEMENT

ಕವಿಗೋಷ್ಠಿ:

ಸೂಕ್ಷ್ಮ ದೃಷ್ಟಿ ಭಾವ ಸಂಯೋಜನೆಯೊಂದಿಗೆ ಓದುಗರ ಮನ ತಟ್ಟಿ ಚಿಂತನೆಗೆ ಒಳಪಡಿಸುವಂತ ಕಾವ್ಯಗಳು ಗಟ್ಟಿಗೊಳ್ಳುತ್ತವೆ ಎಂದು ಸಾಹಿತಿ ಪುಷ್ಪಾ ಮುರಗೋಡ ಹೇಳಿದರು.

ಗೋಕಾಕ ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾವ್ಯ ಸಾರ್ಥಕತೆ ಪಡೆಯಬೇಕಾದರೆ ಓದುಗರ ಮನತಟ್ಟ ಬೇಕು. ಕಾವ್ಯ ಪಂಪ ಕವಿಯಿಂದ ಪ್ರಾರಂಭಗೊಂಡು ಕುವೆಂಪು ವರೆಗೂ ಬೆಳೆದು ಬಂದಿದೆ. 20ನೇ ಶತಮಾನ ಕನ್ನಡ ಕಾವ್ಯಗಳ ಸುವರ್ಣಯುಗವಾಗಿತ್ತು. ಕಾವ್ಯ ಲೋಕಕ್ಕೆ ಶರಣರ ಕೊಡುಗೆ ಅಪಾರವಾಗಿದ್ದು ಸರಳ ಭಾಷೆಗಳ ವಚನಗಳು ಇಂದಿಗೂ ದಾರಿದೀಪವಾಗಿವೆ ಎಂದರು.

ಎಂ.ಬಿ.ಕೋಮಾರಶೆಟ್ಟಿ, ಶಿವಕುಮಾರ ಕಟ್ಟಿಮನಿ, ಯಲ್ಲಪ್ಪ ಕುರಿಹುಲಿ, ಜಯಗೌಡ ಪಾಟೀಲ, ಎಂ.ಆರ್.ಬಾಗೇವಾಡಿ ಸ್ವಾಗತಿಸಿದರು. ಬಿ.ಬಿ.ನಿರ್ವಾಣಿ, ಎನ್.ಎಂ.ಬಡಿಗೇರ, ಎಂ.ವಿ.ಮುಕತ್ತಿಹಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.