ADVERTISEMENT

ಸಂಕೇಶ್ವರ: ಗಡಿಯಲ್ಲೊಬ್ಬ ಅಪರೂಪದ ಕನ್ನಡ ಪ್ರೇಮಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 2:38 IST
Last Updated 1 ನವೆಂಬರ್ 2025, 2:38 IST
   

ಸಂಕೇಶ್ವರ: ಯಾವ ಪ್ರಶಸ್ತಿ, ಸನ್ಮಾನ, ಹಾರ, ಪ್ರಚಾರಕ್ಕೆ ದುಂಬಾಲು ಕನ್ನಡಮ್ಮನ ಸೇವೆ ಮಾಡುತ್ತಿರುವ ವ್ಯಕ್ತಿಯೊಬ್ಬರು ಇಲ್ಲಿದ್ದಾರೆ. ಕುಮಾರ ಎಂ. ತಳವಾ ಎಂದ ತಕ್ಷಣ ಈ ಭಾಗದಲ್ಲಿ ನೆನಪಾಗುವುದು ಕನ್ನಡತನ. ಸಮೀಪದ ಸೊಲ್ಲಾಪುರ ಗ್ರಾಮದವರಾದ ಅವರು, ಸದ್ಯ ಅಥಣಿ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.

‘ಕನ್ನಡವನ್ನುಳಿದೆನಗೆ ಅನ್ಯಜೀವನವಿಲ್ಲ’ ಎಂಬ ಮಾತಿನಂತೆಯೇ ಬದುಕುವ ಇವರು ಪಿಎಚ್.ಡಿ ಪದವೀಧರ. ವಿದ್ಯಾರ್ಥಿ ದೆಸೆಯಿಂದಲೇ ಅಪಾರವಾದ ಕನ್ನಡಪ್ರೀತಿ ಬೆಳೆಸಿಕೊಂಡು ಗಡಿ ಕನ್ನಡದ ಕಂಪು ಸೂಸುತ್ತಿದ್ದಾರೆ.

ಕುಮಾರ ಅವರು ಎಲ್ಲೇ ಹೋದರೂ ಕನ್ನಡವಿಲ್ಲದಿದ್ದರೆ ಅಲ್ಲಿ ಪ್ರಶ್ನಿಸಿ ಕನ್ನಡತನ ಮೆರೆಯುತ್ತಾರೆ. ಯಾವುದೇ ಸಮಾರಂಭಗಳಿದ್ದರೂ ಕನ್ನಡ ಪುಸ್ತಕ, ಶಲ್ಯ, ಕನ್ನಡಾಂಬೆಯ ಭಾವಚಿತ್ರವನ್ನೇ ಉಡುಗೊರೆಯಾಗಿ ನೀಡುತ್ತಾರೆ. ತಮ್ಮ ಅಧ್ಯಾಪನ ವೃತ್ತಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಕನ್ನಡದ ದೀಕ್ಷೆ ನೀಡಿದ್ದಾರೆ. ತಮ್ಮ ಸಹಿಯಿಂದ ಹಿಡಿದು ಎಟಿಎಂ ಬಳಕೆಯವರೆಗೆ ಪ್ರತಿಯೊಂದರಲ್ಲೂ ಕನ್ನಡ ಬಳಸುತ್ತಾರೆ.

ADVERTISEMENT

ದುಡಿಯುವ ಹಣದಲ್ಲಿ ಶೇ 10ರಷ್ಟು ಕನ್ನಡ ಸೇವೆಗೆ ಮೀಸಲಿಡುತ್ತ ಬಂದಿದ್ದಾರೆ. ತಮ್ಮ ಮದುವೆಯಲ್ಲಿ ಸಂಪೂರ್ಣವಾಗಿ ಹಳದಿ– ಕೆಂಪು ಬಾವುಟದೊಂದಿಗೆ ಸಿಂಗರಿಸಿ, ಪುಸ್ತಕ ಬಿಡುಗಡೆ, ದಾಂಪತ್ಯ ಕವಿಗೋಷ್ಠಿ, ಕನ್ನಡಪರ ಚಿಂತನ– ಮಂಥನ ಗೋಷ್ಠಿಗಳನ್ನು ಏರ್ಪಡಿಸಿ ಕನ್ನಡ ಹಬ್ಬದ ರೀತಿಯಲ್ಲಿ ಮದುವೆಯಾಗಿ ನಾಡಿನ ಗಮನ ಸೆಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.