ADVERTISEMENT

ಬೆಳಗಾವಿ ವಿಮಾನನಿಲ್ದಾಣ ಆವರಣದಲ್ಲಿ ಕನ್ನಡದ ಕಂಪು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 14:29 IST
Last Updated 28 ಅಕ್ಟೋಬರ್ 2021, 14:29 IST
ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಬೆಳಗಾವಿಯ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಗುರುವಾರ ನಡೆದ ಕನ್ನಡ ಗೀತಗಾಯನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಉಪನ್ಯಾಸಕರು ಪಾಲ್ಗೊಂಡಿದ್ದಾರೆ
ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಬೆಳಗಾವಿಯ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಗುರುವಾರ ನಡೆದ ಕನ್ನಡ ಗೀತಗಾಯನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಉಪನ್ಯಾಸಕರು ಪಾಲ್ಗೊಂಡಿದ್ದಾರೆ   

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ‘ಕನ್ನಡಕ್ಕಾಗಿ ನಾವು’ ಅಭಿಯಾನದ ಅಂಗವಾಗಿ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಸಾಂಬ್ರಾ ಗ್ರಾ.‍‍‍ಪಂ. ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಕಾಲೇಜು ಸಹಯೋಗದಲ್ಲಿ ಗೀತಗಾಯನ ಕಾರ್ಯಕ್ರಮವನ್ನು ಸಾಂಬ್ರಾ ವಿಮಾನನಿಲ್ದಾಣದ ಆವರಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಯಿತು.‌

ಸಾಂಬ್ರಾ ಪ್ರೌಢಶಾಲೆ ಮತ್ತು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಅಲ್ಲಿದ್ದವರು ಕನ್ನಡ ಹಾಡುಗಳನ್ನು ಹಾಡಿದರು.

ಮುಖ್ಯ ಅತಿಥಿಯಾಗಿದ್ದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಕಾಲೇಜಿನ ಪ್ರಾಚಾರ್ಯ ಡಾ.ಎಂ. ಜಯಪ್ಪ, ‘ಕನ್ನಡ ನಾಡು-ನುಡಿಯ ಬಗ್ಗೆ ಎಲ್ಲರಿಗೂ ಅಭಿಮಾನ ಇರಬೇಕು’ ಎಂದರು.

ADVERTISEMENT

ಸಾಂಬ್ರಾ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಂಜನಾ ವಿಠ್ಠಲ ಅಪ್ಪಯಾಚೆಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷೆ ಕಲ್ಲವ್ವ ಬಾಗಣ್ಣ ಕರೆಗಾರ, ಶಿಕ್ಷಣಾಧಿಕಾರಿ ಎ.ಎನ್. ಪ್ಯಾಟಿ, ಸಹಾಯಕ ಕಾರ್ಯಕ್ರಮ ಸಂಯೋಜಕ ಕೆ.ಎಸ್. ನಂದೇಶ, ಗ್ರಾಮೀಣ ಬಿಇಒ ಆರ್.ಪಿ. ಜುಟ್ಟನ್ನವರ, ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶಕುಮಾರ ಮೌರ್ಯ, ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿ ಈರಪ್ಪ ವಾಲಿ, ನಿಲ್ದಾಣದ ವ್ಯವ‌ಸ್ಥಾಪಕ ನಿಯಾಜ, ಇಂಡಿಗೊ ಏರ್‌ಲೈನ್ಸ್‌ ವ್ಯವಸ್ಥಾಪಕ ನಾಗೇಶ, ಸ್ಟಾರ್ ಏರ್‌ಲೈನ್ಸ್‌ ವಿಭಾಗೀಯ ಮುಖ್ಯಸ್ಥ ಕಿರಣ, ಟ್ರುಜೆಟ್‌ ಏರ್‌ಲೈನ್ಸ್‌ ವ್ಯವಸ್ಥಾಪಕ ನಿಶಾಂತ, ಮಾರಿಹಾಳ ಪೊಲೀಸ್ ಠಾಣೆಯ ಸಿಪಿಐ ಬಿ.ಎಸ್. ಮಂಟೂರ ಇದ್ದರು.

ಸಾಂಬ್ರಾ ಪಿಡಿಒ ಗಂಗಾಧರ ನಾಯಿಕ ಪ್ರತಿಜ್ಞಾವಿಧಿ ಬೋಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.