ADVERTISEMENT

ಬೈಲಹೊಂಗಲ: ‘ಕಾರ್ಗಿಲ್ ವಿಜಯ ಹೆಮ್ಮೆಪಡುವ ದಿನ’

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 4:16 IST
Last Updated 27 ಜುಲೈ 2021, 4:16 IST
ಬೈಲಹೊಂಗಲ ತಾಲ್ಲೂಕಿನ ಮೇಕಲಮರ್ಡಿ ಗ್ರಾಮದಲ್ಲಿ ಜಯ ಕರ್ನಾಟಕ ಸಂಘಟನೆ, ಗೆಳೆಯರ ಬಳಗದಿಂದ ಸೋಮವಾರ ನಡೆದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರನ್ನು ಸತ್ಕರಿಸಲಾಯಿತು
ಬೈಲಹೊಂಗಲ ತಾಲ್ಲೂಕಿನ ಮೇಕಲಮರ್ಡಿ ಗ್ರಾಮದಲ್ಲಿ ಜಯ ಕರ್ನಾಟಕ ಸಂಘಟನೆ, ಗೆಳೆಯರ ಬಳಗದಿಂದ ಸೋಮವಾರ ನಡೆದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರನ್ನು ಸತ್ಕರಿಸಲಾಯಿತು   

ಬೈಲಹೊಂಗಲ: ‘ಭಾರತೀಯ ಸೇನೆಯಲ್ಲಿ ಸೇವೆ ಮಾಡುವುದೆ ಪುಣ್ಯ. ಅಂತಹ ಸೇವೆಯಲ್ಲಿರುವ ಪ್ರತಿಯೊಬ್ಬ ಯೋಧರೂ ದೇವರ ಸಮಾನ. ಆ ದೇವತಾ ಸ್ವರೂಪಿಯಾಗಿರುವ ಯೋಧರಿಗೆ ಸಲ್ಲಿಸುವ ಗೌರವ, ಪ್ರೀತಿ, ಅಭಿಮಾನಕ್ಕೆ ಬೆಲೆ ಕಟ್ಟಲಾಗದು' ಎಂದು ನಿವೃತ್ತ ಸೇನಾಧಿಕಾರಿ ಪರ್ವೆಜ್ ಹವಾಲ್ದಾರ್ ಹೇಳಿದರು.

ತಾಲ್ಲೂಕಿನ ಮೇಕಲಮರ್ಡಿ ಗ್ರಾಮದಲ್ಲಿ ಜಯ ಕರ್ನಾಟಕ ಸಂಘಟನೆ ಮತ್ತು ಗೆಳೆಯರ ಬಳಗದಿಂದ ಸೋಮವಾರ ನಡೆದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು.

'ಕಾರ್ಗಿಲ್ ವಿಜಯೋತ್ಸವ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವ ದಿನವಾಗಿದೆ. ಈ ದಿನ ಸ್ಮರಣೆ ಮಾಡಿಕೊಂಡು ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ, ಸೇವೆ, ನಿವೃತ್ತಿ ಹೊಂದಿರುವ ಸೈನಿಕರಿಗೆ ಗೌರವ ಸಲ್ಲಿಸುವ ಸಂಘಟನೆಯವರ ಕಾರ್ಯ ಪ್ರಶಂಸನೀಯ' ಎಂದರು.

ADVERTISEMENT

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ನಿಂಗಪ್ಪ ಅರಕೇರಿ ಅಧ್ಯಕ್ಷತೆ ವಹಿಸಿದ್ದರು.

ಇದೇ ವೇಳೆ ನಿವೃತ್ತ ಸೈನಿಕ ವೀರು ದೊಡ್ಡವೀರಪ್ಪನವರ ಸೇರಿದಂತೆ ಹಲವರನ್ನು ಸತ್ಕರಿಸಲಾಯಿತು. ಸಂಘಟಕರಾದ ಕಾಶೀಮ್ ಜಮಾದಾರ, ಮಂಜುನಾಥ ಹೊಸಮನಿ, ಬಾಬು ಹೊಸಮನಿ, ವಿನೋದ ಹೊಸಮನಿ, ಮಲ್ಲೇಶ ಕುರಿ, ಮಹಾಂತೇಶ ಸತ್ತಿಗೇರಿ, ಮಲ್ಲಿಕಾರ್ಜುನ ಮುತವಾಡ, ಬಸವರಾಜ ಚಿಕ್ಕನಗೌಡ, ವಿನಾಯಕ ಮಾಸ್ತಮರ್ಡಿ, ಬಾಬು ಬಾಗವಾನ, ಕಿತ್ತೂರು ಪಟ್ಟಣ ಪಂಚಾಯ್ತಿ ಸದಸ್ಯ ಅಶ್ಪಕ್ ಹವಾಲ್ದಾರ್, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.