ADVERTISEMENT

ಹಳ್ಳಿಗಳಲ್ಲಿ ಶಾಲೆಗಳ ಹತ್ತಿರವೇ ಮದ್ಯದ ಅಂಗಡಿಗಳು: ಕಾಂಗ್ರೆಸ್ ಸದಸ್ಯರ ದೂರು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 22:08 IST
Last Updated 15 ಡಿಸೆಂಬರ್ 2021, 22:08 IST
   

ಬೆಳಗಾವಿ (ಸುವರ್ಣ ವಿಧಾನಸೌಧ): ಹಳ್ಳಿಗಳಲ್ಲಿ ಅಂಗಡಿಗಳ ಮೂಲಕ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇದರಿಂದ ಜನರ ನೆಮ್ಮದಿ ಹಾಳಾಗಿದೆ ಎಂದು ಕಾಂಗ್ರೆಸ್‌ನ ಹಲವು ಸದಸ್ಯರು ದೂರಿದರು.

ವಿಧಾನಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಬಸನಗೌಡ ದದ್ದಲ ಅವರ ಪ್ರಶ್ನೆಗೆ ಅಬಕಾರಿ ಸಚಿವ ಕೆ.ಗೋಪಾಲಯ್ಯ ಉತ್ತರ ನೀಡಿದ ವೇಳೆ ಹಲವು ಸದಸ್ಯರು ಗಮನ ಸೆಳೆದರು.

‘ಹಳ್ಳಿಗಳಲ್ಲಿ ಶಾಲೆಗಳ ಹತ್ತಿರ ಮದ್ಯದ ಅಂಗಡಿಗಳು ಆರಂಭವಾಗಿವೆ’ ಎಂದು ರೂಪಕಲಾ ಶಶಿಧರ್‌ ಹೇಳಿದರು. ‘ಅಬಕಾರಿ ಆದಾಯದ ಗುರಿ ಮುಟ್ಟಲು ಹಳ್ಳಿಗಳಲ್ಲಿ ಅಂಗಡಿಗಳ ಮೂಲಕ ಮದ್ಯ ಮಾರಲಾಗುತ್ತಿದೆ. ಇದರ ಬದಲು ಎಂಎಸ್‌ಐಎಲ್‌ಗೆ ಅನುಮತಿ ನೀಡುವುದು ಉತ್ತಮ’ ಎಂದು ಕೆ.ವೈ. ನಂಜೇಗೌಡ ಹೇಳಿದರು.

ADVERTISEMENT

‘ಹಳ್ಳಿಗಳಲ್ಲಿ 7–8 ಅಂಗಡಿಗಳು ತಲೆ ಎತ್ತುತ್ತಿವೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ದಾಂಪತ್ಯ ಜೀವನದಲ್ಲಿ ಬಿರುಕು ಮೂಡುತ್ತಿದೆ’ ಎಂದು ಇ.ತುಕಾರಾಂ ಗಮನ ಸೆಳೆದರು.

ಜೆಡಿಎಸ್‌ನ ಎಚ್.ಕೆ.ಕುಮಾರಸ್ವಾಮಿ, ’ಮೂರು ವರ್ಷಗಳಲ್ಲಿ 568 ಸಿಎಲ್‌7 ಅಂಗಡಿಗಳಿಗೆ ಪರವಾನಗಿ ನೀಡಲಾಗಿದೆ ಎಂದು ಸಚಿವರೇ ಉತ್ತರ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.