ADVERTISEMENT

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಯಾತ್ರೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 13:21 IST
Last Updated 10 ನವೆಂಬರ್ 2021, 13:21 IST
ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಅಂಗವಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಯಾತ್ರೆ ಕೈಗೊಂಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಅಧಿಕಾರಿ ಸದಾನಂದ ಅಮರಾಪುರ ಅವರನ್ನು ನಿಪ್ಪಾಣಿ ತಾ.ಪಂ. ಅಧಿಕಾರಿಗಳು ಬುಧವಾರ ಸ್ವಾಗತಿಸಿದರು
ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಅಂಗವಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಯಾತ್ರೆ ಕೈಗೊಂಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಅಧಿಕಾರಿ ಸದಾನಂದ ಅಮರಾಪುರ ಅವರನ್ನು ನಿಪ್ಪಾಣಿ ತಾ.ಪಂ. ಅಧಿಕಾರಿಗಳು ಬುಧವಾರ ಸ್ವಾಗತಿಸಿದರು   

ಬೆಳಗಾವಿ: ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಅಂಗವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧಿಕಾರಿ ಸದಾನಂದ ಅಮರಾಪುರ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಯಾತ್ರೆ ಹಮ್ಮಿಕೊಂಡಿದ್ದು, ಬುಧವಾರ ಕರ್ನಾಟಕ ಪ್ರವೇಶಿಸಿದರು. ನಿಪ್ಪಾಣಿ ತಾಲ್ಲೂಕು ಪ್ರವೇಶಿಸಿದ ಅವರನ್ನು ತಾ.ಪಂ. ಅಧಿಕಾರಿಗಳು ಮಾರ್ಲಾಪಣೆ ಮಾಡಿ ಸ್ವಾಗತಿಸಿದರು.

ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕರಾಗಿರುವ ಅವರು ಅ.23ರಂದು ಕಾಶ್ಮೀರದಿಂದ ಸೈಕಲ್ ಯಾತ್ರೆ ಆರಂಭಿಸಿದ್ದರು. ಪಂಜಾಬ್, ಹರಿಯಾಣ, ರಾಜಸ್ತಾನ, ಗುಜರಾತ್, ಮಹಾರಾಷ್ಟ್ರದ ಮೂಲಕ ಕರ್ನಾಟಕಕ್ಕೆ ಬಂದಿದ್ದಾರೆ. 19 ದಿನಗಳಲ್ಲಿ 7 ರಾಜ್ಯಗಳಲ್ಲಿ ಸಂಚರಿಸಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಮಹತ್ವ ಸಾರಿದ್ದಾರೆ. ಪಂಚಾಯತ್‌ರಾಜ್ ಇಲಾಖೆಯ ಯೋಜನೆಗಳು ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

‘‍ನಿತ್ಯ 200 ಕಿ.ಮೀ. ಸಂಚರಿಸುತ್ತಿದ್ದೇನೆ. ಕನ್ಯಾಕುಮಾರಿವರೆಗೆ 4ಸಾವಿರ ಕಿ.ಮೀ. ಆಗಲಿದೆ. ಈಗಾಗಲೇ 3ಸಾವಿರ ಕಿ.ಮೀ.ಗೂ ಹೆಚ್ಚು ಕ್ರಮಿಸಿದ್ದೇನೆ. ಪೂರ್ಣಗೊಂಡಿದೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.