ಕೌಜಲಗಿ: ಸ್ಥಳೀಯರ ಅಗತ್ಯಕ್ಕನುಗುಣವಾಗಿ ಬಸ್ ತಂಗುದಾಣ ಮತ್ತು ಗ್ರಾಮೀಣ ಪ್ರದೇಶದ ಜನತೆಯ ಮನರಂಜನೆಗೆ ಬಯಲು ರಂಗ ಮಂದಿರಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಶನಿವಾರ ರಡ್ಡೆರಟ್ಟಿ, ಮನ್ನಿಕೇರಿ, ಮೆಳವಂಕಿ ಗ್ರಾಮಗಳಲ್ಲಿ ರಾಜ್ಯ ಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಡಿ ನಿರ್ಮಿಸಲಾದ ಬಸ್ ತಂಗುದಾನ ಉದ್ಘಾಟಿಸಿ ಮಾತನಾಡಿದರು.
ಸಮಾಜ ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮಸ್ಥರ ಸಹಕಾರವಿರಬೇಕು. ಪರಸ್ಪರ ಸಹಕಾರ ಮನೋಭಾವದಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ. ಗ್ರಾಮದ ಪ್ರತಿ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ಸವಲತ್ತುಗಳನ್ನು ರೂಪಿಸಿದೆ. ಗ್ರಾಮಸ್ಥರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪ್ರಮುಖರಾದ ಈರಪ್ಪ ನಾಯ್ಕರ, ಮುತ್ತೆಪ್ಪ ನಾಂವಿ, ಮಹಾಂತೇಶ ದಳವಾಯಿ, , ಬಸವರಾಜ ಅಂಗಡಿ, ಯಲ್ಲಪ್ಪ ನಾಯ್ಕರ, ಬಸವರಾಜ ನಾಯ್ಕರ, ರಾಜು ಗೌಡರ, ಬಸವರಾಜ ಒಣಕಣವಿ, ಮಹಾಂತೇಶ ಕಂಬಾರ, ಗೂಳಪ್ಪ ನಾಡಗೌಡ, ಬಸು ತೋಟಗಿ, ಮಹಾಂತೇಶ ಅಂಗಡಿ, ಸುಭಾಸ ಪೂಜೇರಿ ಸೇರಿದಂತೆ ಕೌಜಲಗಿ, ಮನ್ನಿಕೇರಿ, ಮೇಳವಂಕಿ ಗ್ರಾಮಗಳ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.