ಖಾನಾಪುರ: ರಸ್ತೆ, ಸೇತುವೆ ಸೇರಿ ಮೂಲಸೌಲಭ್ಯ ವಂಚಿತ ತಾಲ್ಲೂಕಿನ ನೇರಸಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಗಳಾ ಗ್ರಾಮದ ನಿವಾಸಿ, ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಗ್ರಾಮಸ್ಥರು ಹೊತ್ತುಕೊಂಡು 8 ಕಿ.ಮೀ ನಡೆದಿದ್ದಾರೆ.
‘ಗ್ರಾಮದ ಸುತ್ತಲ ಕಾಡಿನಲ್ಲಿ ಕರಡಿ, ಹುಲಿ, ಚಿರತೆ ಸೇರಿ ವನ್ಯಮೃಗಗಳಿವೆ. ಈಗ ಬಿಟ್ಟೂಬಿಡದೇ ಮಳೆ ಆಗುತ್ತಿದೆ. ಕೊಂಗಳಾ ಗ್ರಾಮಕ್ಕೆ ತೆರಳುವ ರಸ್ತೆಯ ಮೇಲಿನ ಭಂಡೂರಿ ಹಳ್ಳ ಮತ್ತು ಮಹದಾಯಿ ನದಿಗಳಲ್ಲಿ ನೀರು ಪ್ರವಾಹೋಪಾದಿಯಲ್ಲಿ ಹರಿಯುತ್ತಿದೆ.
‘ಕುರ್ಚಿ, ಕಟ್ಟಿಗೆಯ ವ್ಯವಸ್ಥೆ ಮಾಡಿಕೊಂಡು ಗ್ರಾಮದ ವೆಂಕಟ ಗಾಂವಕರ ಅವರನ್ನು 6 ಮಂದಿ ಹೊತ್ತುಕೊಂಡು ಸಾಗಿದೆವು. ಮುಖ್ಯ ರಸ್ತೆ ತಲುಪಿದ ಬಳಿಕ, ಅಲ್ಲಿಂದ ವಾಹನದ ಮೂಲಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದೆವು’ ಎಂದು ಗ್ರಾಮಸ್ಥರು ತಿಳಿಸಿದರು.
‘ಕಳೆದ ವರ್ಷ ಭೀಮಗಡ ವನ್ಯಧಾಮದ ಅಮಗಾಂವ ಗ್ರಾಮದ ಮಹಿಳೆಯೊಬ್ಬರಿಗೆ ಅನಾರೋಗ್ಯ ಕಾಡಿದ್ದರಿಂದ ಹೀಗೇ ಹೊತ್ತುಕೊಂಡು 10 ಕಿ.ಮೀ ಸಾಗಿದ್ದೆವು’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ರಾಹೂತ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.