ADVERTISEMENT

ನೆರೆ ಸಂತ್ರಸ್ತರಿಗೆ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 15:30 IST
Last Updated 6 ನವೆಂಬರ್ 2020, 15:30 IST
ಗೋಕಾಕದಲ್ಲಿ ಶುಕ್ರವಾರ ಫಿನೊಲೆಕ್ಸ್ ಸಂಸ್ಥೆಯ ಸಿ.ಎಸ್.ಆರ್. ಪಾಲುದಾರ ಪುಣೆಯ ಮುಕುಲ್ ಮಾಧವ ಪ್ರತಿಷ್ಠಾನ ಮತ್ತು ರೋಟರಿ ಕ್ಲಬ್ ವತಿಯಿಂದ ನೆರೆ ಸಂತ್ರಸ್ತರಿಗೆ ವಿವಿಧ ಸಾಮಗ್ರಿಗಳ ಕಿಟ್‌ಗಳನ್ನು ಶುಕ್ರವಾರ ವಿತರಿಸಲಾಯಿತು
ಗೋಕಾಕದಲ್ಲಿ ಶುಕ್ರವಾರ ಫಿನೊಲೆಕ್ಸ್ ಸಂಸ್ಥೆಯ ಸಿ.ಎಸ್.ಆರ್. ಪಾಲುದಾರ ಪುಣೆಯ ಮುಕುಲ್ ಮಾಧವ ಪ್ರತಿಷ್ಠಾನ ಮತ್ತು ರೋಟರಿ ಕ್ಲಬ್ ವತಿಯಿಂದ ನೆರೆ ಸಂತ್ರಸ್ತರಿಗೆ ವಿವಿಧ ಸಾಮಗ್ರಿಗಳ ಕಿಟ್‌ಗಳನ್ನು ಶುಕ್ರವಾರ ವಿತರಿಸಲಾಯಿತು   

ಗೋಕಾಕ: ‘ಕೃಷಿ ಚಟುವಟಿಕೆಗಳಿಗೆ ಪೂರಕ ಉದ್ದೇಶದೊಂದಿಗೆ ಪಿವಿಸಿ ಪೈಪ್ ಉತ್ಪಾದನೆಯಲ್ಲಿ ತೊಡಗಿರುವ ಫಿನೊಲೆಕ್ಸ್ ಸಂಸ್ಥೆ ಪ್ರವಾಹ ಪೀಡಿತರಿಗೆ ನೆರವಾಗಿ ಮಾನವೀಯತೆ ಮೆರೆದಿದೆ’ ಎಂದು ನಗರಸಭೆ ಪ್ರಭಾರ ಪೌರಾಯುಕ್ತ ಶಿವಾನಂದ ಹಿರೇಮಠ ಹೇಳಿದರು.

ಇಲ್ಲಿನ ಕೆಎಲ್‌ಇ ಸಂಸ್ಥೆಯ ದಿ.ಮಹಾದೇವಪ್ಪಣ್ಣ ಮುನವಳ್ಳಿ ಇಂಗ್ಲಿಷ್ ಮಾಧ್ಯಮ ಶಾಲಾ ಸಂಕೀರ್ಣದಲ್ಲಿ ಪುಣೆಯ ಫಿನೊಲೆಕ್ಸ್‌ ಇಂಡಸ್ಟ್ರೀಸ್ ಸಂಸ್ಥೆಯ ಸಿ.ಎಸ್.ಆರ್. ಪಾಲುದಾರ ಮುಕುಲ್ ಮಾಧವ ಪ್ರತಿಷ್ಠಾನ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಶುಕ್ರವಾರ ನೆರೆ ಸಂತ್ರಸ್ರರಿಗೆ ಮತ್ತು ಬಿಪಿಎಲ್ ಕಾರ್ಡ್‌ದಾರರಿಗೆ 19 ಬಗೆಯ ಸಾಮಗ್ರಿಗಳು ಒಳಗೊಂಡ ಕಿಟ್ ವಿತರಿಸಿ ಮಾತನಾಡಿದರು.

ರೋಟರಿ ಸೇವಾ ಸಂಸ್ಥೆ ಮುಖ್ಯಸ್ಥ ಸೋಮಶೇಖರ ಮಗದುಮ್, ಫಿನೊಲೆಕ್ಸ್‌ ಸಂಸ್ಥೆ ಬೆಳಗಾವಿ ಜಿಲ್ಲಾ ಪ್ರತಿನಿಧಿ ರಾಮಕೃಷ್ಣ ಜಿ.ಎಸ್., ಸ್ಥಳೀಯ ವಿತರಕ ವಿವೇಕಾನಂದ ಚುನಮರಿ 300 ಮಂದಿಗೆ ಕಿಟ್‌ಗಳನ್ನು ವಿತರಿಸಿದರು.

ADVERTISEMENT

ಕೆಎಲ್‌ಇ ಸಂಸ್ಥೆಯ ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಚುನಮರಿ, ರೋಟರಿ ಕ್ಲಬ್ ಅಧ್ಯಕ್ಷ ವಿಶ್ವನಾಥ ಕಡಕೋಳ, ಜಗದೀಶ ಚುನಮರಿ, ರಾಜು ವರದಾಯಿ, ದಿಲೀಪ ಮೆಳವಂಕಿ, ಸತೀಶ ಬೆಳಗಾವಿ, ಸಚಿನ ಜಾಧವ ಇದ್ದರು.

ಸುನೀಲ ಮಾಳಿ ಸ್ವಾಗತಿಸಿದರು. ಅರುಣ ಅಲಾಸೆ ಪರಿಚಯಿಸಿದರು. ಸತೀಶ ನಾಡಗೌಡ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.