ADVERTISEMENT

ಅನಿವಾಸಿ ಭಾರತೀಯರ ಮದುವೆಯಲ್ಲಿ ಡೊನಾಲ್ಡ್ ಟ್ರಂಪ್–ಪ್ರಭಾಕರ ಕೋರೆ ಮುಖಾಮುಖಿ

ಉದ್ಯಮಿ ರವಿಶಂಕರ್ ಭೂಪಲಾಪೂರ್ ದಂಪತಿಯ ಪುತ್ರಿ ಡಾ.ಮನಾಲಿ ಮದುವೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 16:14 IST
Last Updated 28 ನವೆಂಬರ್ 2021, 16:14 IST
ಬೆಳಗಾವಿಯ ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷ ಪ್ರಭಾಕರ ಕೋರೆ ಈಚೆಗೆ ಅಮೆರಿಕದಲ್ಲಿ ಅಲ್ಲಿನ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದರು
ಬೆಳಗಾವಿಯ ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷ ಪ್ರಭಾಕರ ಕೋರೆ ಈಚೆಗೆ ಅಮೆರಿಕದಲ್ಲಿ ಅಲ್ಲಿನ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದರು   

ಬೆಳಗಾವಿ: ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷ ಹಾಗೂ ರಾಜ್ಯಸಭೆ ಮಾಜಿ ಸದಸ್ಯಪ್ರಭಾಕರ ಕೋರೆ ಅವರು ಈಚೆಗೆ ಅಮೆರಿಕಕ್ಕೆ ಭೇಟಿ ನೀಡಿದ ವೇಳೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸೌಹಾರ್ದಯುತವಾಗಿ ಭೇಟಿಯಾದರು.

ಉದ್ಯಮಿ ರವಿಶಂಕರ್ ಭೂಪಲಾಪೂರ್ ದಂಪತಿಯ ಪುತ್ರಿ ಡಾ.ಮನಾಲಿ ಮದುವೆಯ ಸಮಾರಂಭದಲ್ಲಿ ಟ್ರಂಪ್ ಅವರನ್ನು ಭೇಟಿಯಾದರು. ಪ್ರಸ್ತುತ ಜಾಗತಿಕ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಗಳ ಕುರಿತು ವಿಚಾರ ವಿನಿಮಯ ಮಾಡಿಕೊಂಡರು.ರವಿಶಂಕರ ಭೂಪಲಾಪೂರ ಜೊತೆಗಿದ್ದರು.

'ನಮ್ಮದು ಸೌಹಾರ್ದಯುತ ಭೇಟಿಯಾಗಿತ್ತು. ಭಾರತೀಯರ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ ಎಂದು ಅಗರು ಹೇಳಿದರು. ಭಾರತೀಯರ ಸಹಕಾರದೊಂದಿಗೆ ಮುಂದಿನ ಬಾರಿ ಅಧ್ಯಕ್ಷ ಆಗುತ್ತೇನೆ ಎಂದು ನನ್ನ ಪ್ರಶ್ನೆಗೆ ವಿಶ್ವಾಸದಿಂದ ಪ್ರತಿಕ್ರಿಯೆ ನೀಡಿದರು' ಎಂದು ಕೋರೆ 'ಪ್ರಜಾವಾಣಿ'ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.