ADVERTISEMENT

ಅಂಗಾಂಗ ದಾನಿಗಳ ಸಂಖ್ಯೆ ಹೆಚ್ಚಲಿ: ಡಾ.ನೇರ್ಲಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 16:07 IST
Last Updated 14 ಆಗಸ್ಟ್ 2022, 16:07 IST
ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಅಂಗಾಂಗ ದಿನಾಚರಣೆ ಸಮಾರಂಭದಲ್ಲಿ ಡಾ.ಎಂ.ವಿ. ಜಾಲಿ ದೀಪ ಬೆಳಗಿಸಿದರು
ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಅಂಗಾಂಗ ದಿನಾಚರಣೆ ಸಮಾರಂಭದಲ್ಲಿ ಡಾ.ಎಂ.ವಿ. ಜಾಲಿ ದೀಪ ಬೆಳಗಿಸಿದರು   

ಬೆಳಗಾವಿ: ‘ಅಂಗಾಂಗ ದಾನ ಮಾಡಿ ಎನ್ನುವುದಕ್ಕಿಂತ ದಾನ ಮಾಡಿದವರ ಭಾವನಾತ್ಮಕ ಜೀವನವನ್ನು ಕಂಡು ಅವರಿಗೆ ಸಮಾಧಾನ ಪಡಿಸುವುದು ಮುಖ್ಯ’ ಎಂದುಕಿಡ್ನಿ ಕಸಿಯ ಮುಖ್ಯ ತಜ್ಞ ಡಾ.ರಾಜೇಂದ್ರ ನೇರ್ಲಿ ಹೇಳಿದರು.

ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯು ಸಂಶೋಧನಾ ಕೇಂದ್ರದಲ್ಲಿ ವಿಶ್ವ ಅಂಗಾಂಗ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಹೃದಯ, ಕಿಡ್ನಿ ಹಾಗೂ ಚರ್ಮ ದಾನ ಮಾಡಿದ ಕುಟುಂಬದವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅಂಗಾಂಗ ದಾನಗಳು ಅತೀ ಕಡಿಮೆ. ಧಾರ್ಮಿಕ, ಭಾವಾನಾತ್ಮಕ ಹಾಗೂ ಮೂಢನಂಬಿಕೆಯಿಂದ ಅಂಗಾಂಗ ದಾನ ಮಾಡಲು ಹಿಂಜರಿಯುತ್ತಾರೆ. ಅಂಗಾಂಗ ದಾನಿಗಳ ಕುಟುಂಬ ಸದಸ್ಯರು ಬಹಳ ನೋವು ಅನುಭವಿಸುತ್ತಾರೆ. ಅಂಥ ಸಂದರ್ಭದಲ್ಲಿ ಅವರಿಗೆ ಸಮಧಾನ ಪಡಿಸುವುದು ಒಳ್ಳೆಯ ಸೇವೆ’ ಎಂದರು.

ADVERTISEMENT

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ಮಾತನಾಡಿ, ‘ಅಂಗಾಂಗ ದಾನಿಗಳು ಭಾಗ್ಯವಂತರು, ಸಿರಿವಂತರು, ಹೃದಯವಂತರು. ಅವರು ಮರಣಾ ನಂತರ ನೀಡಿದರು ಕೂಡ 8 ಜನರು ಹೊಸ ಜೀವನ ನೀಡಿದ್ದಾರೆ. ನಮ್ಮಲ್ಲಿ ಈಗ 7 ಹೃದಯ, 58 ಕಿಡ್ನಿ ಕಸಿ ಮಾಡಲಾಗಿದೆ’ ಎಂದರು.

ಪ್ಲಾಸ್ಟಿಕ್‌ ಸರ್ಜನ್ ಡಾ.ದರ್ಶನ ರಜಪೂತ ಮಾತನಾಡಿದರು. ಅಮ್ಟೆ ಗ್ರಾಮದ ಸರಪಂಚ ಲಕ್ಷ್ಮಣ ಕೇಸಲ್ಕರ, ವಿಜಯ ಮೋರೆ, ಅಭಿಮನ್ಯು ಡಾಗಾ ಹಾಗೂ ಅಂಗಾಂಗಳನ್ನು ದಾನ ಮಾಡಿದ ಅವರ ಕುಟುಂಬ ಸದಸ್ಯರು ಮಾತನಾಡಿದರು. ಪುಷ್ಪಾ ಪವಾರ, ಜಯಶ್ರೀ ದಂಡಗಿ, ಆಶಾ ಸಾವಂತ, ಅರ್ಜುನ ಗಾಂವಕರ, ಪ್ರಕಾಶ ನಡೋಣಿ, ಜ್ಯೋತಿ ಕುರಮುಡೆ, ಲಿಲಾದೇವಿ ರಾಜಪುರೋಹಿತ, ಪುಷ್ಪಲತಾ ಶ್ರೀಖಂಡೆ ಹಾಗೂ ಪೊಲೀಸ್‌ ಸಿಬ್ಬಂದಿಯನ್ನು ಅಭಿನಂದಿಸಲಾಯಿತು.

ಡಾ.ವಿಶ್ವನಾಥ ಪಟ್ಟಣಶೆಟ್ಟಿ, ಡಾ.ಆನಂದ ವಾಘರಾಳಿ, ಡಾ.ಬಸವರಾಜ ಬಿಜ್ಜರಗಿ, ಡಾ.ಪ್ರಮೋದ ಸುಳಿಕೇರಿ, ನೀರಜ್‌ ದೀಕ್ಷಿತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.