ADVERTISEMENT

ಕೆಎಲ್‌ಎಸ್ ಜಿಐಟಿ ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 10:17 IST
Last Updated 6 ಏಪ್ರಿಲ್ 2022, 10:17 IST
ಬೆಳಗಾವಿಯ ಕೆಎಲ್‌ಎಸ್–ಜಿಐಟಿಯ ವಿದ್ಯಾರ್ಥಿಗಳು ಈಚೆಗೆ ಅಮೆರಿಕದ ಮೆಕ್ಯಾನಿಕಲ್‌ ಎಂಜಿನಿಯರ್‌ಗಳ ಸಮಾಜ ಆಯೋಜಿಸಿದ್ದ ಗ್ಲೋಬಲ್ ಇ–ಫೆಸ್ಟ್‌ನ ವಿವಿಧ ಸ್ಪಧೆಗಳಲ್ಲಿ ಅನೇಕ ಬಹುಮಾನಗಳನ್ನು ಗಳಿಸಿದ್ದಾರೆ
ಬೆಳಗಾವಿಯ ಕೆಎಲ್‌ಎಸ್–ಜಿಐಟಿಯ ವಿದ್ಯಾರ್ಥಿಗಳು ಈಚೆಗೆ ಅಮೆರಿಕದ ಮೆಕ್ಯಾನಿಕಲ್‌ ಎಂಜಿನಿಯರ್‌ಗಳ ಸಮಾಜ ಆಯೋಜಿಸಿದ್ದ ಗ್ಲೋಬಲ್ ಇ–ಫೆಸ್ಟ್‌ನ ವಿವಿಧ ಸ್ಪಧೆಗಳಲ್ಲಿ ಅನೇಕ ಬಹುಮಾನಗಳನ್ನು ಗಳಿಸಿದ್ದಾರೆ   

ಬೆಳಗಾವಿ: ಕೆಎಲ್‌ಎಸ್–ಜಿಐಟಿಯ ಎಎಸ್‌ಎಂಇ ವಿದ್ಯಾರ್ಥಿಗಳು ಈಚೆಗೆ ವರ್ಚುವಲ್‌ ವಿಧಾನದಲ್ಲಿ ನಡೆದ ಎಎಸ್‌ಎಂಇ (ಅಮೆರಿಕದ ಮೆಕ್ಯಾನಿಕಲ್‌ ಎಂಜಿನಿಯರ್‌ಗಳ ಸಮಾಜ) ಆಯೋಜಿಸಿದ್ದ ಗ್ಲೋಬಲ್ ಇ–ಫೆಸ್ಟ್‌ನ ವಿವಿಧ ಸ್ಪಧೆಗಳಲ್ಲಿ ಭಾಗವಹಿಸಿ, ಜಾಗತಿಕ ಮಟ್ಟದಲ್ಲಿ ಅನೇಕ ಬಹುಮಾನಗಳನ್ನು ಗಳಿಸಿದ್ದಾರೆ.

ತ್ರಿಡಿ ಮುದ್ರಣವನ್ನು ಬಳಸಿಕೊಂಡು ನವೀನ ಸಂಯೋಜನೆ ತಯಾರಿಕೆ ತಂಡ ‘ಓಕ್ಟಾ ನೈಟ್’ ವಿಭಾಗದಲ್ಲಿ 1ನೇ ಸ್ಥಾನ ಪಡೆಯುವ ಮೂಲಕ ವಿಶ್ವ ಚಾಂಪಿಯನ್‌ಶಿಪ್ ಪಟ್ಟವನ್ನು ಅಲಂಕರಿಸಿದೆ. ಅವರಿಗೆ $500 ಡಾಲರ್ ನಗದು ಬಹುಮಾನ ನೀಡಲಾಯಿತು. ಈ ತಂಡವು ಮೆಕ್ಯಾನಿಕಲ್, ಏರೊನಾಟಿಕಲ್, ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗಗಳ 10 ವಿದ್ಯಾರ್ಥಿಗಳನ್ನು ಒಳಗೊಂಡಿತ್ತು.

ಗ್ಲೋಬಲ್ ಓರಲ್ ಗಾರ್ಡ್ ಪೋಸ್ಟರ್ ಪ್ರಸ್ತುತಿ ಸ್ಪರ್ಧೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ವಿಭಾಗದ ಮುಸ್ತಕಿಮ್ ಜೋರ್ಡೋಜ್ ಪ್ರಥಮ ಬಹುಮಾನ ಪಡೆದರು. ಅವರಿಗೆ $ 300 ಡಾಲರ್ ನಗದು ಬಹುಮಾನ ದೊರೆತಿದೆ. ಮೆಕ್ಯಾನಿಕಲ್ ವಿಭಾಗದ ಸುಮಿತ್ ಕಾಂಬ್ಳೆ 4ನೇ ಸ್ಥಾನ ಪಡೆದರು. $150 ಡಾಲರ್ ನಗದು ಬಹುಮಾನ ಗಳಿಸಿದರು.

ADVERTISEMENT

ಸ್ಟೂಡೆಂಟ್ಸ್ ಡಿಸೈನ್ ಚಾಲೆಂಜ್ ತಂಡ ಫೈನಲ್‌ಗೆ ತಲುಪಿತು ಮತ್ತು ಜಾಗತಿಕ ಮಟ್ಟದಲ್ಲಿ 4ನೇ ಸ್ಥಾನ ಪಡೆದುಕೊಂಡಿತು. ಈ ತಂಡಗಳಿಗೆ ಎಎಸ್‌ಎಂಇ ಅಧ್ಯಾಪಕ ಸಲಹೆಗಾರ ಡಾ.ಹರ್ಷಿತ್ ಬಿ.ಕುಲಕರ್ಣಿ ಮತ್ತು ಡಾ.ಗಣೇಶ್ ಚಾಟೆ, ಪ್ರೊ.ವಿವೇಕ್ ತಿವಾರಿ, ಡಾ.ಎಸ್.ಎಚ್. ಕುಲಕರ್ಣಿ ಮತ್ತು ಪ್ರೊ.ಸೂರಜ್ ಪಾಟೀಲ ಮಾರ್ಗದರ್ಶ ನ ನೀಡಿದ್ದರು. ಪ್ರಾಂಶುಪಾಲ ಡಾ.ಜಯಂತ್ ಕೆ.ಕಿತ್ತೂರು, ಮೆಕ್ಯಾನಿಕಲ್‌ ವಿಭಾಗದ ಮುಖ್ಯಸ್ಥ ಡಾ.ವಿ.ಎಸ್. ಮಜಾಲಿ, ಏರೊನಾಟಿಕಲ್‌ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಟಿ.ಆರ್. ಅನಿಲ್, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ವಿಜೇತರನ್ನು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.