ADVERTISEMENT

ಕನಸು ನನಸಾಗಿಸಿಕೊಳ್ಳಲು ಪ್ರಯತ್ನಿಸಿ: ಕೆಪಿಎಸ್ ಪ್ರಾಚಾರ್ಯ ಎಚ್. ಶಿವಣ್ಣ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 5:12 IST
Last Updated 26 ಫೆಬ್ರುವರಿ 2026, 5:12 IST
ಮುನವಳ್ಳಿ ಸಮೀಪದ ಯಕ್ಕುಂಡಿಯಲ್ಲಿ ಆಯೋಜಿಸಿದ್ದ ವೃತ್ತಿ ಮೇಳ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಮುನವಳ್ಳಿ ಸಮೀಪದ ಯಕ್ಕುಂಡಿಯಲ್ಲಿ ಆಯೋಜಿಸಿದ್ದ ವೃತ್ತಿ ಮೇಳ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ಮುನವಳ್ಳಿ: ವಿದ್ಯಾರ್ಥಿಗಳು ತಮ್ಮ ವೃತ್ತಿ ಮತ್ತು ಉನ್ನತ ಅಧ್ಯಯನದ ಆಯ್ಕೆಯನ್ನು ಮಾಡಿಕೊಂಡಾಗ ವಿದ್ಯಾರ್ಥಿಗಳ ಮುಂದಿನ ಜೀವನ ರೂಪಿಸಿಕೊಳ್ಳಲು ಸಾಹಾಯಕ ಆಗುತ್ತದೆ ಎಂದು ಕೆಪಿಎಸ್ ಪ್ರಾಚಾರ್ಯ ಎಚ್. ಶಿವಣ್ಣ ಹೇಳಿದರು.

ಯಕ್ಕುಂಡಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಪ್ರೌಢಶಾಲಾ ವಿಭಾಗದಲ್ಲಿ ಬುಧವಾರ ಕೆಪಿಎಸ್ ಪ್ರೌಢಶಾಲೆ ಮತ್ತು ಇಂಡಿಯಾ ಲಿಟರೆಸಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಜರುಗಿದ 9 ಮತ್ತು 10ನೇ ತರಗತಿ ವೃತ್ತಿ ಮೇಳ 2025-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಉನ್ನತ ಶಿಕ್ಷಣದ ಬಗ್ಗೆ ಕನಸು ಕಂಡು ಭವಿಷ್ಯದಲ್ಲಿ ನನಸು ಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದರು.

ADVERTISEMENT

ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಾದ ವೈ ಪಿ ಬೋಳಶೆಟ್ಟಿ, ಇಂಡಿಯಾ ಲಿಟರೆಸಿ ಸಂಸ್ಥೆಯ ಎಂ.ಬಿ. ಗಾಳಿ, ಶಿಕ್ಷಕಿ ಎಸ್.ಟಿ. ಹಂಪನ್ನವರ ಮಾತನಾಡಿದರು.

ದಿವ್ಯಾಶ್ರೀ ಬೋಸಲೆ, ಎಸ್.ಜಿ. ಕ್ಯಾಮಣ್ಣವರ, ಸಿ.ಎಸ್. ಹುಡೇದ ಇದ್ದರು. ಶಿಕ್ಷಕಿ ಬಿ.ಎಂ. ಲಿಗಾಡೆ ಸ್ವಾಗತಿಸಿದರು. ಮಂಜುಳಾ ತೇಗೂರ ನಿರೂಪಿಸಿದರು. ಆರ್.ವಿ. ಗಣಾಚಾರಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.