ADVERTISEMENT

ಕುಮಾರ ಚಲ್ಯ ಕವನಸಂಕಲನಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 8:32 IST
Last Updated 21 ಡಿಸೆಂಬರ್ 2020, 8:32 IST
ಡಾ.ಕುಮಾರ ಚಲ್ಯ
ಡಾ.ಕುಮಾರ ಚಲ್ಯ   

ಬೆಳಗಾವಿ: ಇಲ್ಲಿನ ಡಾ.ಡಿ.ಎಸ್. ಕರ್ಕಿ ಪ್ರತಿಷ್ಠಾನ ಟ್ರಸ್ಟ್‌ನಿಂದ ಕೊಡ ಮಾಡುವ 2020ನೇ ಸಾಲಿನ ಕಾವ್ಯ ಪ್ರಶಸ್ತಿಗೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಕುಮಾರ ಚಲ್ಯ (ಸಿ.ಎಸ್. ಕುಮಾರಸ್ವಾಮಿ) ಅವರ ‘ಗುಲಾಬಿ ಮತ್ತು ಪಾರಿವಾಳ’ ಕವನಸಂಕಲನ ಆಯ್ಕೆಯಾಗಿದೆ.

ಗದಗ–ಡಂಬಳ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಸಿ.ಡಿ. ಕರ್ಕಿ, ಗೌರವ ಕಾರ್ಯದರ್ಶಿ ಗಿರೀಶ ಕರ್ಕಿ, ಟ್ರಸ್ಟಿಗಳಾದ ಬಸವರಾಜ ಗಾರ್ಗಿ, ಅಣ್ಣಪ್ಪ ಕರ್ಕಿ ಮತ್ತು ತೀರ್ಪುಗಾರ್ತಿ ಡಾ.ಗುರುದೇವಿ ಹುಲೆಪ್ಪನವರಮಠ ಉಪಸ್ಥಿತಿಯಲ್ಲಿ 64 ಕವನಸಂಕಲನಗಳನ್ನು ಪರಿಶೀಲಿಸಿ, ಒಂದನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₹ 5ಸಾವಿರ ಹಾಗೂ ಫಲಕ ಒಳಗೊಂಡಿದೆ. ಡಿ. 27ರಂದು ಮಧ್ಯಾಹ್ನ 12ಕ್ಕೆ ರಾಮತೀರ್ಥ ನಗರದ ನಂ. 354, ಗಂಗೋತ್ರಿ ನಿವಾಸದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT