
ಪ್ರಜಾವಾಣಿ ವಾರ್ತೆ
ರಾಯಬಾಗ: ಚುನಾವಣೆಯಲ್ಲಿ ಗೆದ್ದು, ಶಾಸಕರಾಗುವುದು ಮುಖ್ಯವಲ್ಲ, ಕ್ಷೇತ್ರದ ಜನರೊಂದಿಗೆ ಸ್ಪಂದಿಸಿ, ಅವರ ಸಮಸ್ಯೆಗಳಿಗೆ ಸಹಕರಿಸುವುದು, ಚುನಾಯಿತ ಪ್ರತಿನಿಧಿಗಳ ಆದ್ಯ ಕರ್ತವ್ಯ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಪಟ್ಟಣದ ಹೊರಭಾಗದಲ್ಲಿರುವ ಹುಲ್ಯಾಳ ಕೆರೆಯನ್ನು ಶನಿವಾರ ವೀಕ್ಷಣೆ ಮಾಡಿ ಮಾತನಾಡಿದರು.
ನೀರಾವರಿ ಇಲಾಖೆಯ ಅಧಿಕಾರಿಗಳು ಪೊಲೀಸ್ ಇಲಾಖೆ ಸಹಕಾರದೊಂದಿಗೆ ಅಲ್ಲಲ್ಲಿ ನೀರು ಪೋಲಾಗದಂತೆ ಕಾಳಜಿವಹಿಸಬೇಕು ಎಂದರು.
ಮಹಾವೀರ ಮೋಹಿತೆ, ಅಮಿತ ಘಾತಗೆ,ಅರ್ಜುನ ನಾಯಿಕವಾಡಿ, ದಿಲೀಪ ಜಮಾದಾರ, ಹಾಜಿ ಮುಲ್ಲಾ, ಮಹೇಶ ಕೊರವಿ, ತಮ್ಮಾನಿ ನಿಂಗಣೂರೆ , ಫಾರೂಕ್ ಮೋಮಿನ್, ಶಿವು ಪಾಟೀಲ, ನಾಮದೇವ ಕಾಂಬಳೆ, ಕಿರಣ ಕಾಂಬಳೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.