ADVERTISEMENT

ಉಚಿತ ನೀಡಿದ ದೇಶಗಳು ದಿವಾಳಿಯಾಗಿವೆ: ಜಗದೀಶ ಮೆಟಗುಡ್ಡ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 4:20 IST
Last Updated 25 ಏಪ್ರಿಲ್ 2024, 4:20 IST
ಬೈಲಹೊಂಗಲ ತಾಲ್ಲೂಕು ತಡಸಲೂರ ಗ್ರಾಮದಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಮತ ಯಾಚಿಸಿದರು
ಬೈಲಹೊಂಗಲ ತಾಲ್ಲೂಕು ತಡಸಲೂರ ಗ್ರಾಮದಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಮತ ಯಾಚಿಸಿದರು   

ಬೈಲಹೊಂಗಲ: ‘ಜಗತ್ತಿನ ಅನೇಕ ದೇಶಗಳು ಎಲ್ಲವೂ ಉಚಿತ ನೀಡಿ, ಬಳಿಕ ದಿವಾಳಿ ಆಗಿವೆ.‌ ಹಾಗಾಗಿ ಭಾರತದ ಪರಿಸ್ಥಿತಿ ಅರ್ಥ ಮಾಡಿಕೊಂಡು ದೇಶಕ್ಕೆ ಮೋದಿ ಅವರು ಮತ್ತೆ ಪ್ರಧಾನಿ ಆಗಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಮಾಜಿ ಶಾಕಸ ಜಗದೀಶ ಮೆಟಗುಡ್ಡ ತಿಳಿಸಿದರು.

ಮತಕ್ಷೇತ್ರದ ತಡಸಲೂರ ಗ್ರಾಮದ ಚನ್ನಮ್ಮನವರ ಓಣಿಯ ವಾಲ್ಮೀಕಿ ದೇವಸ್ಥಾನದ ಹತ್ತಿರ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ‘ವನಿಜೋಲಾ ದೇಶ ಪ್ರೆಟ್ರೋಲಿಯಂ ಉತ್ಪತ್ತಿ ಮಾಡುವ ದೇಶ. ಆ ದೇಶ ಅಲ್ಲಿನ ಜನರಿಗೆ ಎಲ್ಲವೂ ಉಚಿತ ನೀಡಿ ದಿವಾಳಿ ಆಗಿದೆ.‌ ಪಕ್ಕದ ದೇಶ ಶ್ರೀಲಂಕಾದಲ್ಲಿ ಒಂದೇ ಮನೆತನ ಆಳ್ವಿಕೆ ಮಾಡಿ ಇಡೀ ದೇಶವನ್ನೆ ಹಾಳು ಮಾಡಿದೆ. ಶ್ರೀಲಂಕಾ ಪ್ರವಾಸೋದ್ಯಮದಲ್ಲಿ ಜಗತ್ತಿನಲ್ಲೇ 10ನೇ ಸ್ಥಾನದಲ್ಲಿತ್ತು. ಅಂತಹ ದೇಶವೇ ಹಾಳಾಗಿದೆ. ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಪ್ರಧಾನಿ ಆದ ಬಳಿಕ ಬೆಲೆಗಳು ಗಗನಕ್ಕೇರಿ ಪಾಕಿಸ್ತಾವು ದಿವಾಳಿ ಆಗಿದೆ’ ಎಂದರು.

‘ಪಾಕಿಸ್ತಾನದಲ್ಲೇ ಮೋದಿ ಅವರಂಥ ಪ್ರಧಾನಿ ಬೇಕು ಎಂದು ಅಲ್ಲಿಯ ಜನರು ಹೇಳುತ್ತಾರೆ. ಆದರೆ ಕರ್ನಾಟಕದ ವಿಧಾನಸಭೆಯಲ್ಲೇ ಪಾಕಿಸ್ತಾನ ಜಿಂದಾಬಾದ್‌ ಎಂದು ಘೋಷಣೆ ಕುಗುತ್ತಿದ್ದಾರೆ. ನರೇಂದ್ರ ಮೋದಿಯವರ ಪ್ರಭಾವ ನಮ್ಮ ಜನರಿಗೆ ತಿಳಿಯುತ್ತಿಲ್ಲ. ಬೇರೆ ದೇಶ ಮೋದಿ ನಾಯಕತ್ವ ಒಪ್ಪಿಕೊಂಡಿದ್ದಾರೆ’ ಎಂದರು.

ADVERTISEMENT

‘ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲಲಿದೆ ಎಂದು ಸಮೀಕ್ಷೆಗಳು ಹೇಳುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಆಗಲಿದೆ. ಬೆಳಗಾವಿ ಲೋಕಸಭೆಯಿಂದ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೂ ಅವರು ಯಾವುದೇ ಕೆಲಸ ಮಾಡುವುದಿಲ್ಲ. ಹಾಗಾಗಿ, ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರನ್ನು ಗೆಲ್ಲಿಸಬೇಕು’ ಎಂದು ತಿಳಿಸಿದರು.‌

ಅಭ್ಯರ್ಥಿ ಜಗದೀಶ ಶೆಟ್ಟರ್ ಮಾತನಾಡಿ, ‘ನರೇಂದ್ರ ಮೋದಿ ಅವರ 10 ವರ್ಷಗಳ ಸಾಧನೆ ಹಾಗೂ ರೈತರ ಆದಾಯ ದ್ವಿಗುಣಗೊಳಿಸಲು ಮಾಡಿದ ಕ್ರಮಗಳು ಹಲವು’ ಎಂದರು.

 ಡಾ.ವಿ.ಐ. ಪಾಟೀಲ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ, ಮಂಡಲ ಅಧ್ಯಕ್ಷ ಗುರುಪಾದ ಕಳ್ಳಿ, ಪ್ರಮುಖರಾದ ಗುರು ಮೆಟಗುಡ್ಡ, ಸುನೀಲ್ ವರ್ಣೇಕರ, ಸುಭಾಷ ಬಾಗೇವಾಡಿ, ಬಸವರಾಜ ಬಂಡಿವಡ್ಡರ, ಜೆಡ್‌.ಪಿ. ಮುರುಗೋಡ, ಈರಣ್ಣ ಹುಬ್ಬಳ್ಳಿ, ಗೂಳಪ್ಪ ಹೊಸಮನಿ ಹಾಗೂ ಸ್ಥಳೀಯ ಮುಖಂಡರು, ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.