ADVERTISEMENT

ಬೆಳಗಾವಿ: ‘ಖಾತ್ರಿ’ ಕೆಲಸಕ್ಕೆ ಯಂತ್ರ ಬಳಕೆ!

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 6:15 IST
Last Updated 29 ಜುಲೈ 2021, 6:15 IST
ತೆಲಸಂಗ ಸಮೀಪದ ಕನ್ನಾಳ ಗ್ರಾಮ ಪಂಚಾಯ್ತಿಯಿಂದ ಉದ್ಯೋಗ ಖಾತ್ರಿ ಕೆಲಸಕ್ಕೆ ಜೆಸಿಬಿ ಬಳಸಲಾಗಿದೆ
ತೆಲಸಂಗ ಸಮೀಪದ ಕನ್ನಾಳ ಗ್ರಾಮ ಪಂಚಾಯ್ತಿಯಿಂದ ಉದ್ಯೋಗ ಖಾತ್ರಿ ಕೆಲಸಕ್ಕೆ ಜೆಸಿಬಿ ಬಳಸಲಾಗಿದೆ   

ತೆಲಸಂಗ (ಬೆಳಗಾವಿ ಜಿಲ್ಲೆ): ಸಮೀಪದ ಕನ್ನಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕೆಲಸಕ್ಕೆ ಜೆಸಿಬಿ ಬಳಸಿ ನಿಯಮ ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಸಸಿಗಳನ್ನು ನೆಡುವುದಕ್ಕಾಗಿ ಪಂಚಾಯ್ತಿಯಿಂದ ಗುಂಡಿಗಳನ್ನು ತೋಡಲಾಗುತ್ತಿದೆ. ಈ ಕೆಲಸಕ್ಕೆ ಮಾನವ ಸಂಪನ್ಮೂಲದ ಬದಲಿಗೆ ಯಂತ್ರ ಬಳಸಲಾಗುತ್ತಿದೆ. ಇದರಿಂದ ದುಡಿಯುವ ಕೈಗಳಿಗೆ ಕೆಲಸ ಸಿಗದಂತಾಗಿದೆ. ಅಕ್ರಮ ನಡೆದಿದೆ ಎಂದು ದೂರಲಾಗಿದೆ.

‘ಕೂಲಿ ಕಾರ್ಮಿಕರನ್ನು ಬಳಸಿ ಕೆಲಸ ಮಾಡಿಸುವಂತೆ ಗ್ರಾ.ಪಂ. ಸದಸ್ಯರಿಗೆ ಹೇಳಿದ್ದೆ. ಜೆಸಿಬಿ ಬಳಕೆ ಬಗ್ಗೆ ಗೊತ್ತಿಲ್ಲ. ವಿಚಾರಿಸುತ್ತೇನೆ’ ಎಂದು ಕನ್ನಾಳದ ಪಿಡಿಒ ಎಂ.ಎಸ್. ಚೌದರಿ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.