ADVERTISEMENT

ಅಥಣಿ: ಸಂಭ್ರಮದ ಮಹಾವೀರ ಜಯಂತಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 13:51 IST
Last Updated 17 ಏಪ್ರಿಲ್ 2019, 13:51 IST
ಅಥಣಿಯಲ್ಲಿ ಮಹಾವೀರ ಜಯಂತಿ ಅಂಗವಾಗಿ ಪಲ್ಲಕ್ಕಿ ಉತ್ಸವ ನಡೆಯಿತು
ಅಥಣಿಯಲ್ಲಿ ಮಹಾವೀರ ಜಯಂತಿ ಅಂಗವಾಗಿ ಪಲ್ಲಕ್ಕಿ ಉತ್ಸವ ನಡೆಯಿತು   

ಅಥಣಿ: ಇಲ್ಲಿ ಭಗವಾನ್ ಮಹಾವೀರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಜೈನ ಪೇಟೆಯಲ್ಲಿನ ಮಹಾವೀರ ಭವನದಲ್ಲಿ ಭಾವಚಿತ್ರಕ್ಕೆ ಅಧಿಕಾರಿಗಳು ಮತ್ತು ಜೈನ ಸಮಾಜದ ಮುಖಂಡರು ಪೂಜೆ ಸಲ್ಲಿಸಿದರು. ಜೈನ ಮಹಿಳಾ ಮಂಡಳ ವತಿಯಿಂದ ಬಾಲ ಮಹಾವೀರನಿಗೆ ನಾಮಕರಣ ಮಾಡಲಾಯಿತು.

ನಂತರ ನಡೆದ ಧರ್ಮಸಭೆಯಲ್ಲಿ ಮಾತನಾಡಿದ ಪ್ರಾಚಾರ್ಯ ಕುಮಾರ ಮಾಲಗಾಂವೆ, ‘ಮಹಾವೀರರರು ತಮ್ಮ ನಡೆ, ನುಡಿ, ಆಚಾರ, ವಿಚಾರಗಳ ಮೂಲಕ ಜೈನ ಧರ್ಮವನ್ನು ವಿಶ್ವ ಧರ್ಮವನ್ನಾಗಿ ಮಾಡಿದ ಮಹಾಪುರುಷ. ಅವರು ಜಗತ್ತಿಗೆ ನೀಡಿದ ಸಂದೇಶಗಳು ಪ್ರತಿಯೊಬ್ಬರ ಬದುಕಿಗೆ ಆದರ್ಶ ಮಾರ್ಗವಾಗಿವೆ. ಅವುಗಳನ್ನು ಪಾಲಿಸುವುದರಿಂದ ವಿಶ್ವದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯವಿದೆ’ ಎಂದರು.

ADVERTISEMENT

ತಹಶೀಲ್ದಾರ್‌ ಎಂ.ಎನ್. ಬಳಿಗಾರ ಪಲ್ಲಕ್ಕಿ ಮತ್ತು ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು. ಪ್ರಮುಖ ಬೀದಿಗಳಲ್ಲಿ ಉತ್ಸವ ಸಂಚರಿಸಿತು.

ತಾಲ್ಲೂಕು ಪಂಚಾಯ್ತಿ ಇಪ ರವಿ ಬಂಗಾರೆಪ್ಪನವರ, ಅಧಿಕಾರಿಗಳಾದ ಬಿ.ಎಸ್. ಯಾದವಾಡ, ಅರುಣ ಯಲಗುದ್ರಿ, ಮುಖಂಡರಾದ ಅಮರ ದುರ್ಗಣ್ಣನವರ, ಅಭಿನಂದನ ಪಡನಾಡ, ಸಾತಗೌಡ ಅಥಣಿ, ನಿತಿನ ಘೋಂಗಡಿ, ಬಾಬುರಾವ ಮುದೋಳ, ಚಂದ್ರಕಾಂತ ಘೋಂಗಡಿ, ಅಶೋಕ ದಾನಗೌಡರ, ಸಂತೋಷ ಬೊಮ್ಮಣ್ಣನವರ, ಮಹಾವೀರ ಕಾಮಗೌಡ, ಶಾಂತಾ ಲಠ್ಠೆ, ಲಲಿತಾ ವೇಳಾಪೂರೆ, ಜಯಶ್ರೀ ಕಿಣಂಗೆ, ಅನಂತ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.