
ಬೆಳಗಾವಿ: ಇಲ್ಲಿನ ರಾಮತೀರ್ಥ ನಗರದ ಸರ್ಕಾರಿ ವಿಶೇಷ ದತ್ತು ಸ್ವೀಕಾರ ಕೇಂದ್ರಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸೋಮವಾರ ಭೇಟಿ ನೀಡಿ, ಕೇಂದ್ರಕ್ಕೆ ದಾಖಲಾದ ಎರಡು ಗಂಡು ಮಕ್ಕಳ ನಾಮಕರಣ ನೆರವೇರಿಸಿದರು.
ಒಂದು ಮಗುವಿಗೆ ಶಿವಾ, ಮತ್ತೊಂದು ಮಗುವಿಗೆ ಗುರು ಎಂದು ನಾಮಕರಣ ಮಾಡಿ, ಈ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ಮಕ್ಕಳ ರಕ್ಷಣಾ ಘಟಕದಡಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳ ಪಾಲನಾ ಸಂಸ್ಥೆಯಲ್ಲಿ ಸುಮಾರು 150 ಮಕ್ಕಳಿದ್ದಾರೆ. ಅರ್ಹ ದಂಪತಿ ಅಥವಾ ಪಾಲಕರು ಮನಸ್ಸು ಮಾಡಿದರೆ, ನಿಯಮಾನುಸಾರ ದತ್ತು ನೀಡಲಾಗುವುದು. ಬೆಳಗಾವಿಯ ಮಕ್ಕಳ ಪಾಲನಾ ಸಂಸ್ಥೆಗಳಿಂದ ಈವರೆಗೆ 131 ಮಕ್ಕಳನ್ನು ದತ್ತು ನೀಡಲಾಗಿದೆ. ಈ ಪೈಕಿ 12 ಮಕ್ಕಳನ್ನು ವಿದೇಶಿ ದಂಪತಿ ದತ್ತು ಪಡೆದಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕೇರಳದ ದಂಪತಿಗೂ ದತ್ತು ಕೊಡಲಾಗಿದೆ’ ಎಂದರು. ಇಲಾಖೆ ಉಪನಿರ್ದೇಶಕ ಆರ್.ನಾಗರಾಜ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ, ಸಚಿನ ಹಿರೇಮಠ, ಜೆ.ಟಿ.ಲೋಕೇಶ, ಎಸ್.ಎಂ.ಜನವಾಡೆ, ಮಹೇಶ ಸಂಗಾನಟ್ಟಿ, ಮಲ್ಲೇಶ ಕುಂದರಗಿ, ರಾಜಕುಮಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.