ADVERTISEMENT

ಬೆಳಗಾವಿ: ಮಸಗುಪ್ಪಿ ಸೇತುವೆ ತೆರವು ಸಂಚಾರ ಪ್ರಾರಂಭ 

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 7:47 IST
Last Updated 24 ಆಗಸ್ಟ್ 2025, 7:47 IST
ಮೂಡಲಗಿ ತಾಲ್ಲೂಕಿನ ಮಸಗುಪ್ಪಿ ಸೇತುವೆಯು ಜಲಾವೃತದಿಂದ ಮುಕ್ತವಾಗಿ ಶನಿವಾರ ಬೆಳಿಗ್ಗೆಯಿಂದ ವಾಹನಗಳ ಸಂಚಾರ ಪ್ರಾರಂಭಗೊಂಡಿದೆ. 
ಮೂಡಲಗಿ ತಾಲ್ಲೂಕಿನ ಮಸಗುಪ್ಪಿ ಸೇತುವೆಯು ಜಲಾವೃತದಿಂದ ಮುಕ್ತವಾಗಿ ಶನಿವಾರ ಬೆಳಿಗ್ಗೆಯಿಂದ ವಾಹನಗಳ ಸಂಚಾರ ಪ್ರಾರಂಭಗೊಂಡಿದೆ.    

ಮೂಡಲಗಿ: ಘಟಪ್ರಭಾ ನದಿಯ ನೀರಿನ ಒಳ ಹರಿವು ಶುಕ್ರವಾ ಮಧ್ಯಾಹ್ನದಿಂದ ಕಡಿಮೆಯಾಗುತ್ತಿದ್ದು, ಜಲಾವೃತಗೊಂಡಿದ್ದ ತಾಲ್ಲೂಕಿನ ಮಸಗುಪ್ಪಿ ಸೇತುವೆಯು ನದಿ ನೀರಿನಿಂದ ತೆರವು ಗೊಂಡಿದೆ. ಶನಿವಾರ ಬೆಳಿಗ್ಗೆಯಿಂದ ವಾಹನ ಸಂಚಾರ ಯಥಾ ಸ್ಥಿತಿಯಲ್ಲಿ ಪ್ರಾರಂಭಗೊಂಡಿದೆ. ಬೆಳಿಗ್ಗೆ ಸೇತುವೆ ಮೇಲೆ ವಾಹನಗಳ ದಟ್ಟಣೆ ಕಂಡುಬಂತು.

ತಾಲ್ಲೂಕಿನ ಢವಳೇಶ್ವರ, ಅವರಾದಿ, ಹುಣಶ್ಯಾಳ ಪಿವೈ, ಸುಣಧೋಳಿಯ ಬ್ರಿಡ್ಜ್ ಕಮ್‌ ಬ್ಯಾರೆಜ್‌ಗಳು ಶನಿವಾರ ಜಲಾವೃತದಿಂದ ಮುಕ್ತವಾಗದೆ ಹಲವು ಗ್ರಾಮಗಳ ಮಧ್ಯದಲ್ಲಿ ಸಂಚಾರವು ನಿಂತಿರುವುದು ಮುಂದುವರೆದಿದೆ.

ಬೆಳೆ ಹಾನಿ: ಘಟಪ್ರಭಾ ನದಿ ಪಾತ್ರದಲ್ಲಿರುವ ಗ್ರಾಮಗಳಲ್ಲಿ ಬೆಳೆದಿರುವ ಕಬ್ಬು, ಗೋವಿನ ಜೋಳ ಬೆಳೆಯಲ್ಲಿ ನದಿ ಹೊಕ್ಕು ತಾಲ್ಲೂಕಿನಲ್ಲಿ ಸಾವಿರಾರು ಎಕರೆಯಷ್ಟು ಬೆಳೆ ಹಾನಿಯಾಗಿದೆ. ನದಿಗೆ ನೀರು ಹೆಚ್ಚಾದಾಗ ರೈತರು ಈ ಸಮಸ್ಯೆಯನ್ನು ಎದುರಿಸುವುದು ಪ್ರತಿ ವರ್ಷ ಸಾಮಾನ್ಯವಾಗಿದೆ ಎಂದು ರೈತರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.