ADVERTISEMENT

ಹೃದಯದಲ್ಲಿ ಸ್ಥಳ ಗಳಿಸುವುದು ದೊಡ್ಡ ಆಸ್ತಿ: ಆತ್ಮಾರಾಮ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 8:06 IST
Last Updated 3 ಅಕ್ಟೋಬರ್ 2020, 8:06 IST
ತೆಲಸಂಗ ಗ್ರಾಮದಲ್ಲಿ ನಡೆದ ಔಷಧಿ ವಿತರಣೆ ಕಾರ್ಯಕ್ರಮದಲ್ಲಿ ಕಕಮರಿಯ ಆತ್ಮಾರಾಮ ಸ್ವಾಮೀಜಿ ಅವರನ್ನು ಗ್ರಾಮಸ್ಥರು ಸತ್ಕರಿಸಿದರು
ತೆಲಸಂಗ ಗ್ರಾಮದಲ್ಲಿ ನಡೆದ ಔಷಧಿ ವಿತರಣೆ ಕಾರ್ಯಕ್ರಮದಲ್ಲಿ ಕಕಮರಿಯ ಆತ್ಮಾರಾಮ ಸ್ವಾಮೀಜಿ ಅವರನ್ನು ಗ್ರಾಮಸ್ಥರು ಸತ್ಕರಿಸಿದರು   

ತೆಲಸಂಗ: ‘ನಮ್ಮ ಸುತ್ತಮುತ್ತಲಿನವರ ಹೃದಯದಲ್ಲಿ ನಮಗೆ ಸ್ಥಳವಿದೆ ಎಂದಾದರೆ ಅದಕ್ಕಿಂತ ದೊಡ್ಡ ಆಸ್ತಿ ಇನ್ನಾವುದೂ ಇಲ್ಲ’ ಎಂದು ಕಕಮರಿಯ ಆತ್ಮಾರಾಮ ಸ್ವಾಮೀಜಿ ಹೇಳಿದರು.

ಇಲ್ಲಿನ ಸಿದ್ದರಾಮೇಶ್ವರ ಮಠದ ಬಯಲು ರಂಗಮಂದಿರದಲ್ಲಿ ಸಾರ್ವಜನಿಕರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಕಷ್ಟಕ್ಕೆ ಆಗದ ಮಕ್ಕಳು, ಬಡತನ ಹಂಚಿಕೊಳ್ಳದ ಪ್ರೀತಿ, ತಮಾಷೆ ಸಹಿಸದ ಸ್ನೇಹ, ಬೆಳವಣಿಗೆ ಸಹಿಸದ ಬಂಧುಗಳನ್ನು ನಂಬಿ ಜೀವನ ನಡೆಸಲು ಸಾಧ್ಯವಿಲ್ಲ’ ಎಂದರು.

ADVERTISEMENT

ಹೊನವಾಡದ ಬಾಬುರಾವ ಮಹಾರಾಜರು ಮತ್ತು ಕುಂಬಾರ ಪೀಠದ ಬಸವಗುಂಡಯ್ಯ ಸ್ವಾಮೀಜಿ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ, ಮುಖಂಡರಾದ ಅರವಿಂದ ಉಂಡೋಡಿ, ಗುರುರಾಜ ಕುಂಬಾರ, ದಾನಪ್ಪ ಹತ್ತಿ, ಮಲ್ಲಿಕಾರ್ಜುನ ಹತ್ತಿ, ಐ.ಜಿ. ಉಂಡೋಡಿ, ಸಿದ್ದು ಕೋಡ್ನಿ, ಶಿವು ಹತ್ತಿ, ಸುರೇಶ ಸನಗೊಂಡ, ಅಶೋಕ ಪರುಶೆಟ್ಟಿ, ಅಮೋಘ ಖೊಬ್ರಿ, ಅಮೋಘಸಿದ್ದ ಟೋಪಣಗೋಳ, ಮಹಾದೇವ ಸಕ್ರಿ, ರಾಜು ಕಾರಂಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.