ADVERTISEMENT

ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಮಾಡಿ: ಎಂಇಎಸ್‌ ಆಗ್ರಹ

ಸಭೆಯಲ್ಲಿ ಪ್ರತಿಯೊಬ್ಬರಿಂದ ನಾಡವಿರೋಧಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 16:07 IST
Last Updated 1 ಜೂನ್ 2022, 16:07 IST
ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ಹೋರಾಟದಲ್ಲಿ ಹುತಾತ್ಮರಾದ 9 ಜನರಿಗೆ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ಹಾಗೂ ಶಿವಸೇನೆ ಕಾರ್ಯಕರ್ತರು ಬೆಳಗಾವಿ ತಾಲ್ಲೂಕಿನ ಹಿಂಡಲಗಾ ಗ್ರಾಮದಲ್ಲಿ ಬುಧವಾರ ಶ್ರದ್ಧಾಂಜಲಿ ಸಲ್ಲಿಸಿದರು
ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ಹೋರಾಟದಲ್ಲಿ ಹುತಾತ್ಮರಾದ 9 ಜನರಿಗೆ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ಹಾಗೂ ಶಿವಸೇನೆ ಕಾರ್ಯಕರ್ತರು ಬೆಳಗಾವಿ ತಾಲ್ಲೂಕಿನ ಹಿಂಡಲಗಾ ಗ್ರಾಮದಲ್ಲಿ ಬುಧವಾರ ಶ್ರದ್ಧಾಂಜಲಿ ಸಲ್ಲಿಸಿದರು   

ಬೆಳಗಾವಿ:‘ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಒತ್ತಾಯಿಸಿ ನೀವೂ ಹೋರಾಟ ಮುಂದುವರಿಸಿ. ನಾವೂ ನಿಮ್ಮ ಜೊತೆಗಿದ್ದೇವೆ’ ಎಂದುಮಹಾರಾಷ್ಟ್ರದ ಶಿವಸೇನೆ ಮುಖಂಡ ಅರುಣ ದುಧವಾಡ್ಕರ್ ಮರಾಠಿಗರಿಗೆ ತಮ್ಮ ಬೆಂಬಲ ಸೂಚಿಸಿದರು.

1986ರಲ್ಲಿ ನಡೆದ ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ ಹೋರಾಟದಲ್ಲಿ ಹುತಾತ್ಮರಾದ 9 ಜನರಿಗೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಹಾಗೂ ಶಿವಸೇನೆ ಕಾರ್ಯಕರ್ತರುತಾಲ್ಲೂಕಿನ ಹಿಂಡಲಗಾ ಗ್ರಾಮದಲ್ಲಿ ಬುಧವಾರ ಶ್ರದ್ಧಾಂಜಲಿ ಸಭೆ ಏರ್ಪಡಿಸಿದ್ದರು.

‘ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ಬಗೆಹರಿಯುವವರೆಗೂ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು ಎಂದು ಸಭೆಯ ಒಕ್ಕೊರಲಿನ ಬೇಡಿಕೆಯಾಗಿತ್ತು.

ADVERTISEMENT

‘ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವವರೆಗೂ ಹೋರಾಡುತ್ತೇವೆ. ನೀವು ಮುಂಬೈನಲ್ಲಿ ಧರಣಿ ಹಮ್ಮಿಕೊಂಡರೆ, ಅಲ್ಲಿಗೂ ಬರುತ್ತೇವೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತರೋಣ’ ಎಂದು ಎಂಇಎಸ್‌ ಅಧ್ಯಕ್ಷ ದೀಪಕ ದಳವಿ,ಮುಖಂಡ ಮನೋಹರ ಕಿಣೇಕರ್‌ ಕರೆ ನೀಡಿದರು.

ಶುಭಂ ಶೆಳಕೆ, ಪ್ರಕಾಶ ಮರಗಾಲೆ, ಮಾಳೋಜಿರಾವ್ ಅಷ್ಟೇಕರ್, ಪ್ರಕಾಶ ಮರಗಾಲೆ, ಶಿವಾಜಿ ಸುಂಠಕರ, ಸರಿತಾ ಪಾಟೀಲ, ರೇಣು ಕಿಲ್ಲೇಕರ, ಸುಧಾ ಭಾತಖಾಂಡೆ ಸೇರಿದಂತೆ ಹಲವರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.