ಬೆಳಗಾವಿ: ಇಲ್ಲಿನ ಹುತಾತ್ಮ ಚೌಕ್‌ನಲ್ಲಿ ಬುಧವಾರ ಹುತಾತ್ಮರ ದಿನಾಚರಣೆ ನಡೆಯಿತು. ಕರ್ನಾಟಕ–ಮಹಾರಾಷ್ಟ್ರ ಗಡಿ ಹೋರಾಟದಲ್ಲಿ ಮಡಿದವರಿಗೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರು ಗೌರವ ಸಲ್ಲಿಸಿದರು.
‘ರಾಜ್ಯದಲ್ಲಿ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು’ ಎಂದು ಒತ್ತಾಯಿಸಿ ಮಾರುಕಟ್ಟೆ ಪ್ರದೇಶದಲ್ಲಿ ರ್‍ಯಾಲಿ ನಡೆಸಿದರು.
‘ಬೆಳಗಾವಿ, ಖಾನಾಪುರ, ನಿಪ್ಪಾಣಿ, ಬೀದರ್, ಭಾಲ್ಕಿ, ಕಾರವಾರ ಸಹ ಸಂಯುಕ್ತ ಮಹಾರಾಷ್ಟ್ರ ಝಾಲಾಚ್ ಪಾಹಿಜೆ’ ಎಂದು ನಾಡವಿರೋಧಿ ಘೋಷಣೆ ಕೂಗಿದರು.
ಮುಖಂಡರಾದ ಮಾಲೋಜಿ ಅಷ್ಟೇಕರ, ಪ್ರಕಾಶ ಮರಗಾಲೆ, ಮದನ್ ಭಾಮನೆ, ರಂಜೀತ ಚವ್ಹಾಣಪಾಟೀಲ, ಸಂಜಯ ಶಿಂಧೆ, ಸಂಭಾಜಿ ಚವ್ಹಾಣ, ರೇಣು ಕಿಲ್ಲೇಕರ, ಸರಿತಾ ಪಾಟೀಲ, ಗಣೇಶ ದಡ್ಡೀಕರ, ರಮಾಕಾಂತ ಕೊಂಡೂಸ್ಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.