ADVERTISEMENT

ಖಾನಾಪುರ: ಮಕ್ಕಳಿಗೆ ಧೈರ್ಯ ತುಂಬಿದ ಸಚಿವೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 16:32 IST
Last Updated 23 ಜೂನ್ 2021, 16:32 IST
ಖಾನಾಪುರ ತಾಲ್ಲೂಕಿನ ಘೋಟಗಾಳಿಯಲ್ಲಿ ಕೋವಿಡ್‌ನಿಂದ ತಂದೆ ಹಾಗೂ ತಾಯಿ ಕಳೆದುಕೊಂಡು ಮಕ್ಕಳನ್ನು ಸಚಿವೆ ಶಶಿಕಲಾ ಜಿಲ್ಲೆ ಬುಧವಾರ ಭೇಟಿಯಾದರು
ಖಾನಾಪುರ ತಾಲ್ಲೂಕಿನ ಘೋಟಗಾಳಿಯಲ್ಲಿ ಕೋವಿಡ್‌ನಿಂದ ತಂದೆ ಹಾಗೂ ತಾಯಿ ಕಳೆದುಕೊಂಡು ಮಕ್ಕಳನ್ನು ಸಚಿವೆ ಶಶಿಕಲಾ ಜಿಲ್ಲೆ ಬುಧವಾರ ಭೇಟಿಯಾದರು   

ಬೆಳಗಾವಿ: ಖಾನಾಪುರ ತಾಲ್ಲೂಕಿನ ಘೋಟಗಾಳಿ ಗ್ರಾಮದಲ್ಲಿ ಕೋವಿಡ್‌ನಿಂದ ತಂದೆ ಹಾಗೂ ತಾಯಿ ಕಳೆದುಕೊಂಡು ಅನಾಥರಾಗಿರುವ ಇಬ್ಬರು ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಶಶಿಕಲಾ ಜೊಲ್ಲೆ ಬುಧವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.

ಕೂಲಿ ಮಾಡುತ್ತಿದ್ದ ಘೋಟಗಾಳಿ ಗ್ರಾಮದ ಸಂಜಯ ವೆಂಕಪ್ಪ ಕರಲೆಕರ ಹಾಗೂ ಅವರ ಪತ್ನಿ ಶೀತಲ ವೆಂಕಪ್ಪ ಕರಲೆಕರ ಇತ್ತೀಚೆಗೆ ಕೋವಿಡ್‌ನಿಂದ ಮೃತಪಟ್ಟಿದ್ದರು.

ದಂಪತಿಯ‌ ಸಾವಿನಿಂದ ಅನಾಥರಾಗಿರುವ ಅವರ ಮಕ್ಕಳಾದ ಸಂಜನಾ ಹಾಗೂ ಶುಭಂ ಅವರಿಗೆ ಸಚಿವರು ಧೈರ್ಯ ತುಂಬಿದರು. ‘ಕೋವಿಡ್‌ನಿಂದ ತಂದೆ- ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಪೋಷಣೆ ಹಾಗೂ ಶಿಕ್ಷಣಕ್ಕೆ ಎಲ್ಲ ರೀತಿಯ ನೆರವು‌ ನೀಡಲಾಗುವುದು’ ಎಂದು ತಿಳಿಸಿದರು.

ADVERTISEMENT

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಸವರಾಜ ವರವಟ್ಟಿ, ತಹಶೀಲ್ದಾರ್‌ ರೇಷ್ಮಾ ತಾಳಿಕೋಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.