ADVERTISEMENT

ನೀರಾವರಿ ಯೋಜನೆಗಳಿಗೆ ಅನುದಾನಕ್ಕೆ ಪ್ರಯತ್ನ: ಶಾಸಕ ದುರ್ಯೋಧನ ಐಹೊಳೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 5:12 IST
Last Updated 26 ಫೆಬ್ರುವರಿ 2026, 5:12 IST
ಚಿಕ್ಕೋಡಿ ತಾಲ್ಲೂಕಿನ ಕರೋಶಿ ಗ್ರಾಮದ ಹೊರವಲಯದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಭೂಮಿಪೂಜೆ ನೆರವೇರಿಸಿದರು
ಚಿಕ್ಕೋಡಿ ತಾಲ್ಲೂಕಿನ ಕರೋಶಿ ಗ್ರಾಮದ ಹೊರವಲಯದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಭೂಮಿಪೂಜೆ ನೆರವೇರಿಸಿದರು   

ಚಿಕ್ಕೋಡಿ: ‘ಕರಗಾಂವ, ಬೆಂಡವಾಡ ಹಾಗೂ ಜೈ ಹನುಮಾನ, ಶಿವಶಕ್ತಿ ಏತ ನೀರಾವರಿ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರುವ ಮೂಲಕ ರಾಯಬಾಗ ಮತಕ್ಷೇತ್ರ ಹಸಿರಾಗಿಸುತ್ತೇನೆ’ ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹೇಳಿದರು.

ತಾಲ್ಲೂಕಿನ ಕರೋಶಿ ಗ್ರಾಮದ ಹೊರವಲಯದಲ್ಲಿ ಬುಧವಾರ ₹60 ಲಕ್ಷ ಅನುದಾನದಲ್ಲಿ ಕರೋಶಿ-ಕುಂಗಟೋಳಿ ಮುಖ್ಯರಸ್ತೆಯಿಂದ ಕಮತೇನಹಟ್ಟಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ‘ಕರಗಾಂವ ಏತ ನೀರಾವರಿ ಯೋಜನೆ ಪ್ರಗತಿಯಲ್ಲಿದ್ದು, ಇನ್ನುಳಿದ ನೀರಾವರಿ ಯೋಜನೆಗಳಿಗೆ ಅನುದಾನ ತರಲು ಪ್ರಯತ್ನಿಸಲಾಗುತ್ತಿದೆ. ₹30 ಕೋಟಿ ಮೊತ್ತದಲ್ಲಿ ಜೈನಾಪುರ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಮುಕ್ತಾಯದ ಹಂತದಲ್ಲಿದೆ’ ಎಂದರು.

ಬಿಜೆಪಿ ಮುಖಂಡ ಮಹೇಶ ಭಾತೆ ಮಾತನಾಡಿ, ‘ಯಾದಗೂಡ, ಕರಗಾಂವ, ಬೆನ್ನಿಹಳ್ಳಿ ಹಾಗೂ ಕಮತನೇಹಟ್ಟಿ ಗ್ರಾಮದ ಜನರಿಗೆ ಈ ರಸ್ತೆಯಿಂದ ಸಾಕಷ್ಟು ಅನುಕೂಲವಿದೆ. ಇನ್ನುಳಿದ ರಸ್ತೆ ಅಭಿವೃದ್ಧಿ ಕಾಮಗಾರಿಗೂ ಶೀಘ್ರ ಅನುದಾನ ಬಿಡುಗಡೆ ಮಾಡಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

ADVERTISEMENT

ವಿಜಯ ಕೋಟಿವಾಲೆ, ಪಂಚಾಕ್ಷರಿ ಹಳಿಜೋಳೆ, ಬಾಳು ಮುಗಳಿ, ದುಂಡಯ್ಯ ಪೂಜೇರಿ, ರಾಜು ಕೊಟಗಿ, ಸುರೇಶ ಕೇಸ್ತಿ, ಕಲ್ಲಪ್ಪ ಕುಂಬಾರ, ಏಕನಾಥ ಜಡೆ, ಯುಸೂಫ ಪಟೇಲ, ಬಾಬು ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.