
ಕಾಗವಾಡ: ‘ಮೊಬೈಲ್, ಟಿವಿಗಳು ಮಕ್ಕಳ ಏಕಾಗ್ರತೆ ಹಾಳು ಮಾಡುತ್ತಿರುವುದು ಕಳವಳಕಾರಿ ಸಂಗತಿ. ಉಪಯೋಗಕ್ಕಿಂತ ದುರುಪಯೋಗವೇ ಹೆಚ್ಚಾಗಿದೆ’ ಎಂದು ಐನಾಪೂರ ಪದ್ಮಾವತಿ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಸಂಜಯ ಕುಚನೂರೆ ಹೇಳಿದರು.
ಪಟ್ಟಣದ ಪದ್ಮಾವತಿ ವಿದ್ಯಾವರ್ದಕ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮೊಬೈಲ್‌ಗಳಿಗೆ ಗೀಳಿಗೆ ಒಳಗಾಗಿ ವಿದ್ಯಾರ್ಥಿಗಳು ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪೋಷಕರು ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಅವರನ್ನು ಸಾಧ್ಯವಾದಷ್ಟು ಮೊಬೈಲ್, ಟಿವಿಗಳಿಂದ ದೂರ ಇರಿಸಲು ಪ್ರಯತ್ನಿಸಬೇಕು. ಆಗ ಮಾತ್ರ ಮಕ್ಕಳು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದರು.
ಮೊಬೈಲ್ ಹೆಚ್ಚಾಗಿ ಬಳಸುವುದರಿಂದ ಮೆದುಳಿನ ಮೇಲೆ ದುಷ್ಪರಿಣಾಮ ಬೀರಿ ಸ್ಮರಣ ಶಕ್ತಿ ಕ್ಷೀಣಿಸುತ್ತದೆ’ ಎಂದು ಹೇಳಿದರು.
ಮುಖಂಡ ಮಹಾವೀರ ಪಡನಾಡ, ‘ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿ, ನಾಗರಿಕತೆ ಕಲಿಸಿ ಸತ್ಪ್ರಜೆಗಳನ್ನಾಗಿ ಶಿಕ್ಷಕರು ಮಾಡಬೇಕು’ ಎಂದು ತಿಳಿಸಿದರು.
ಮಹಾವೀರ ಪಡನಾಡ, ಸಂಜು ಕುಚನೂರೆ, ರವೀಂದ್ರ ಬಣಜವಾಡ, ಪ್ರಮೋದ ಲಿಂಬಿಕಾಯಿ, ಗಜಕುಮಾರ ಪಾಟೀಲ, ಬಾಪುಸಾಬ ಪಾಟೀಲ, ಜಯಕುಮಾರ ಪಾಟೀಲ, ಮಹಾವೀರ ಲಿಂಬಿಕಾಯಿ, ವಸಂತ ಹುದ್ದಾರ, ಶೀತಲ ಪಾಟೀಲ, ಮೋಹನ ಪಾಟೀಲ, ಸಿದ್ದಾಂತ ಬಣಜವಾಡ, ಮಂಜುನಾಥ ಕುಚನೂರೆ, ಭರತೇಶ ತೇರದಾಳೆ, ಸಂತೋಷ ತೇರದಾಳೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.