
ಪ್ರಜಾವಾಣಿ ವಾರ್ತೆಸಚಿವೆ ಲಕ್ಷ್ಮಿ ಹೆಬ್ಬಾಳಕರ, ಬಸವಂತ ಕಡೋಲ್ಕರ(ಮಧ್ಯದಲ್ಲಿ ಇರುವವರು) ಹಾಗೂ ಮೃಣಾಲ್ ಹೆಬ್ಬಾಳಕರ
ಬೆಳಗಾವಿ: ಇಲ್ಲಿನ ಬಿ.ಶಂಕರಾನಂದ ಮಾರ್ಗದಲ್ಲಿ ಮಂಗಳವಾರ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪುತ್ರ ಮೃಣಾಲ್ ಅವರ ಕಾರು ಚಾಲಕ ಬಸವಂತ ಕಡೋಲ್ಕರ ಅವರಿಗೆ ಚಾಕುವಿನಿಂದ ಇರಿದ ಪ್ರಕರಣ ಸಂಬಂಧ ಬುಧವಾರ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
‘ತಾಲ್ಲೂಕಿನ ಗೋಜಗಾದ ಶಿವಯ್ಯ ಪೂಜಾರಿ, ಮಿತೇಶ ಬಡಿಗೇರ, ಬೆಳಗುಂದಿಯ ಮೋನಪ್ಪ ಪಾಟೀಲ, ಸಂಪತ ಕಡೋಲ್ಕರ ಬಂಧಿತರು. ಪ್ರಕರಣದ ಬಗ್ಗೆ ಬಸವಂತ ಅವರ ಅವರ ಸ್ನೇಹಿತ ಮದನ್ ಎಂಬುವರು ದೂರು ನೀಡಿದ್ದರು’ ಎಂದು ಕ್ಯಾಂಪ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.