ADVERTISEMENT

ಬೈಲಹೊಂಗಲ | ಕೆಸರುಮಯವಾದ ರಸ್ತೆ: ಹೈರಾಣಾದ ಸವಾರರು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 15:48 IST
Last Updated 4 ಆಗಸ್ಟ್ 2024, 15:48 IST
ಬೈಲಹೊಂಗಲ ಸಮೀಪದ ಚಿಕೊಪ್ಪ, ದುಂಡನಕೊಪ್ಪ ಸಂಪರ್ಕ ರಸ್ತೆ ಕೆಸರುಮಯವಾಗಿದ್ದು, ಅದರಲ್ಲೇ ತಾಯಿಯೊಬ್ಬರು ಮಗುವನ್ನು ಹೊತ್ತು ಸಾಗಿದರು
ಬೈಲಹೊಂಗಲ ಸಮೀಪದ ಚಿಕೊಪ್ಪ, ದುಂಡನಕೊಪ್ಪ ಸಂಪರ್ಕ ರಸ್ತೆ ಕೆಸರುಮಯವಾಗಿದ್ದು, ಅದರಲ್ಲೇ ತಾಯಿಯೊಬ್ಬರು ಮಗುವನ್ನು ಹೊತ್ತು ಸಾಗಿದರು   

ಬೈಲಹೊಂಗಲ: ಸಮೀಪದ ಚಿಕ್ಕೋಪ್ಪ, ದುಂಡನಕೊಪ್ಪ ಗ್ರಾಮಗಳ ಸಂಪರ್ಕ ರಸ್ತೆ ತೀರಾ ಹದಗೆಟ್ಟಿದೆ. ಪೂರ್ಣ ಪ್ರಮಾಣದ ಕೆಸರಿನ ರಸ್ತೆಯಲ್ಲಿ ವಾಹನ ಸವಾರರು, ಪಾದಚಾರಿಗಳು, ರಸ್ತೆ ಅಕ್ಕಪಕ್ಕದ ರೈತರು ಕೆಸರಿನ ರಸ್ತೆಯಿಂದ ಹೈರಾಣಾಗಿದ್ದಾರೆ.

ಸುಮಾರು 3 ಕಿ.ಮೀ ಸಾಗುವ ಈ ರಸ್ತೆ ತಗ್ಗು, ಗುಂಡಿಗಳಿಂದ ಕೂಡಿದೆ. ಪ್ರತಿ ದಿನ ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು, ರೈತರು ಪರದಾಡುವ ಸ್ಥತಿ ನಿರ್ಮಾಣವಾಗಿದೆ.

ಹಲವು ವರ್ಷಗಳಿಂದ ತೆಗ್ಗು ಗುಂಡಿಗಳಿಂದ ಕೂಡಿದ ಈ ರಸ್ತೆಗೆ ಈಚೆಗೆ ಗುಂಡಿ ಬಿದ್ದ ಜಾಗದಲ್ಲಿ ಕಲ್ಲು, ಮಣ್ಣು ಹಾಕಲಾಗಿದೆ. ರೋಲರ್ ಬಳಸದೇ ಹಾಗೆ ಬಿಟ್ಟಿದ್ದರಿಂದ ಅಪಘಾತ ಸಂಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಹಲವಡೆ ರಸ್ತೆ ಮೇಲೇಯೇ ದೊಡ್ಡ, ದೊಡ್ಡ ಕಲ್ಲು, ಮಣ್ಣು ಬಿದ್ದಿರುವ ಕಾರಣ ದೊಡ್ಡ ವಾಹನಗಳ ಸವಾರಿ ಕಷ್ಟವಾಗಿದೆ.

ADVERTISEMENT

ಹತ್ತಿರದ ಕಾರಿಮನಿ ಗ್ರಾಮದ ಸಮೀಪದ ಪ್ರಸಿದ್ಧ ಕಾರಿಮನಿ ಮಲ್ಲಯ್ಯ ದೇವಸ್ಥಾನಕ್ಕೆ ಶ್ರಾವಣ ಮಾಸದ ನಿಮಿತ್ಯ ಸಾವಿರಾರು ಭಕ್ತರು ಇದೇ ಮಾರ್ಗವಾಗಿ ತೆರಳುತ್ತಾರೆ. ಜಮೀನುಗಳಿಗೆ ತೆರಳುವ ರೈತರು, ದಿಚಕ್ರ ವಾಹನ ಸವಾರರು ಭಯಬೀತರಾಗಿ ಸಂಚರಿಸುತ್ತಿದ್ದು, ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ ರಸ್ತೆ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬೈಲಹೊಂಗಲ ಸಮೀಪದ ಚಿಕೊಪ್ಪ ದುಂಡನಕೊಪ್ಪ ಸಂಪರ್ಕ ರಸ್ತೆ ತೀರಾ ಹದಗೆಟ್ಟಿದ್ದು ಕೆಸರುಮಯವಾಗಿದೆ. ಈ ಕೆಸರಿನ ರಸ್ತೆಯಲ್ಲಿ ತಾಯಿ ಒಬ್ಬು ಮಗುವನ್ನು ಹೊತ್ತು ಸಾಗುವ ದೃಶ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.