ADVERTISEMENT

ಘಟಪ್ರಭಾ | ಮೊಹರಂ: ಶಾಂತಿಯುತ ಆಚರಣೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 16:08 IST
Last Updated 13 ಜುಲೈ 2024, 16:08 IST
ಘಟಪ್ರಭಾ ಪೊಲೀಸ್‌ ಠಾಣೆಯಲ್ಲಿ ನಡೆದ ಮೊಹರಂ ಶಾಂತಿಪಾಲನಾ ಸಭೆಯಲ್ಲಿ ಡಿ.ವೈ.ಎಸ್.ಪಿ ದೂದಫೀರ ಮುಲ್ಲಾ ಮಾತನಾಡಿದರು
ಘಟಪ್ರಭಾ ಪೊಲೀಸ್‌ ಠಾಣೆಯಲ್ಲಿ ನಡೆದ ಮೊಹರಂ ಶಾಂತಿಪಾಲನಾ ಸಭೆಯಲ್ಲಿ ಡಿ.ವೈ.ಎಸ್.ಪಿ ದೂದಫೀರ ಮುಲ್ಲಾ ಮಾತನಾಡಿದರು    

ಘಟಪ್ರಭಾ: ಮೊಹರಂ ಹಬ್ಬವನ್ನು ಶಾಂತಿ-ಸೌಹಾರ್ದದಿಂದ ಆಚರಿಸುವಂತೆ ಡಿ.ವೈ.ಎಸ್.ಪಿ ದೂದಫೀರ ಮುಲ್ಲಾ ಹೇಳಿದರು.

ಇಲ್ಲಿಯ ಪೊಲೀಸ್‌ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಭಾವೈಕ್ಯದ ಸಂಕೇತವಾದ ಮೊಹರಂ ಆಚರಣೆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈಭವೀಕರಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸ ಮಾಡದಂತೆ ನಿಗಾ ವಹಿಸಿ ಈ ಬಗ್ಗೆ ಜಾಗೃತರಾಗಿರಬೇಕೆಂದು ಹೇಳಿದರು.

ಪಿ.ಐ ಬಸವರಾಜ ಕಾಮನಬೈಲು ಮಾತನಾಡಿ, ಮೊಹರಂ ತಾಬೂತು ಮತ್ತು ಪಂಜಾಗಳನ್ನು ಕೂಡ್ರಿಸುವ ಕಮೀಟಿಯವರು ನಿರ್ವಹಣೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದರು.

ADVERTISEMENT

ಪಿಎಸ್‌ಐಗಳಾದ ಕಣವಿ, ಎನ್.ಆರ್ ನರಳೆ, ಮುಸ್ಲಿಂ ಸಮುದಾಯದ ಹಿರಿಯರಾದ ಶೌಕತ್ ಕಬ್ಬೂರ, ಕುತಬುದ್ದೀನ ತಟಗಾರ, ಪ.ಪಂ ಮಾಜಿ ಸದಸ್ಯರಾದ ಸಲೀಮ ಕಬ್ಬೂರ, ಇಮ್ರಾನ್ ಬಟಕುರ್ಕಿ, ರಫೀಕ್ ಸಯ್ಯದ್, ಹಜರತಸಾಬ ಕಬ್ಬೂರ, ಮೋದಿನಸಾಬ ಕಬ್ಬೂರ, ಸೇರಿದಂತೆ ಘಟಪ್ರಭಾ, ಶಿಂಧಿಕುರಬೇಟ, ಸಂಗನಕೇರಿ ಗ್ರಾಮಗಳ ಹಿರಿಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.