ಬೆಳಗಾವಿ: ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಅಂಗವಾಗಿ ಭಾನುವಾರ ‘ನಮೋ ರನ್’ ಮ್ಯಾರಥಾನ್ ಆಯೋಜಿಸಲಾಗಿತ್ತು.
ಮಕ್ಕಳು, ಯುವಜನರು, ಮಹಿಳೆಯರು ಸೇರಿದಂತೆ ವಿವಿಧ ವಯೋಮಾನದವರು ಉತ್ಸಾಹದಿಂದ ಪಾಲ್ಗೊಂಡರು.
ಬಸವೇಶ್ವರ ವೃತ್ತದ ಬಳಿ ಶಾಸಕ ಅಭಯ ಪಾಟೀಲ, ಮೇಯರ್ ಮಂಗೇಶ ಪವಾರ ಚಾಲನೆ ಕೊಟ್ಟರು. ಅಲ್ಲಿಂದ ಬಿ.ಎಂ.ಕಂಕಣವಾಡಿ ಆಯುರ್ವೇದ ಕಾಲೇಜು, ನಾಥಪೈ ವೃತ್ತ, ಶಹಾಪುರದ ಖಡೇಬಜಾರ್ ಮಾರ್ಗವಾಗಿ ಸಾಗಿ ‘ಶಿವಚರಿತ್ರೆ’ ಕಲಾಕೃತಿಗಳ ಪ್ರದರ್ಶನ ತಾಣ ಮುಕ್ತಾಯಗೊಂಡಿತು. ಮಾಜಿ ಸಂಸದೆ ಮಂಗಲಾ ಅಂಗಡಿ ಇತರರಿದ್ದರು.
ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಆಯೋಜಿಸಿದ್ದ ‘ನಮೋ ಯುವ ರನ್’ ಮ್ಯಾರಥಾನ್‌ಗೆ ಕೋಟೆ ಕೆರೆ ಬಳಿ ಆರಂಭಗೊಂಡು ವಿವಿಧ ಮಾರ್ಗಗಳಲ್ಲಿ ಸಾಗಿತು.
ಮಾಜಿ ಶಾಸಕ ಅನಿಲ ಬೆನಕೆ, ವಿಜಯ ಕೊಡಗಾನೂರ, ಮಹಾಂತೇಶ ವಕ್ಕುಂದ, ಡಾ.ರವಿ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.