
ಮೂಡಲಗಿ: ರಾಜಸ್ಥಾನ ಕೇಕರಿ ನಗರದಲ್ಲಿ ಜ.16ರಿಂದ 21ರ ವರೆಗೆ ಜರುಗಲಿರುವ 69ನೇ ರಾಷ್ಟ್ರಮಟ್ಟದ ಶಾಲಾ ಶಿಕ್ಷಣ ಇಲಾಖೆಯ 14 ವರ್ಷ ಒಳಗಿನ ಬಾಲಕ, ಬಾಲಕಿಯರ ಕೊಕ್ಕೊ ಟೂರ್ನಿಗೆ ತಾಲ್ಲೂಕಿನ ನಾಗನೂರದ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ಬಾಲಕರ ತಂಡವು ಆಯ್ಕೆಯಾಗಿದೆ. ವಿಜಯಪುರದ ಜಿಲ್ಲೆಯ ಬಾಲಕಿಯರ ತಂಡವು ಆಯ್ಕೆಯಾಗಿದೆ.
ಆಯ್ಕೆಯಾದ ಬಾಲಕರು: ನದೀಶ ಅಲ್ಲಾನೂರ, ರೋಹಿತ ಚವ್ಹಾನ್, ರೇವಣಸಿದ್ದ ಕರ್ಣಿ, ಮೋಹನ ಮೇತ್ರಿ, ಗಜಾನಂದ ಚೌಗಲಾ, ಅಜಯ, ಕಲ್ಲೋಳೆಪ್ಪ ಬಾಗಡಿ, ಶಂಕರಗೌಡ, ದೇಬರಾಜ ಚಲಕ.
ಬಾಲಕಿಯರು: ಲಕ್ಷ್ಮಿ, ಅಯ್ಯಮ್ಮ, ದಾನೇಶ್ವರಿ, ಪ್ರೀಯಾ, ಅಪೇಕ್ಷಾ, ಸಿಂಚನಾ, ರೂಪಾ, ಸರಸ್ವತಿ, ಯಮುನಾ, ನಿತ್ಯಾಶ್ರೀ, ಸುಮಂಗಲಾ, ಯಾಶಿಕಾ.
ತರಬೇತಿ ಶಿಬಿರ: ನಾಗನೂರದ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಎರಡು ತಂಡದ ಆಟಗಾರರಿಗೆ ತರಬೇತಿ ಶಿಬಿರ ಏರ್ಪಡಿಸಿದ್ದರು.
ವಿದ್ಯಾರ್ಥಿಗಳನ್ನು ಗೌರವಿಸಿ ಬೀಳ್ಕೊಟ್ಟರು ಸಂಸ್ಥೆಯ ಅಧ್ಯಕ್ಷ ಬಸಗೌಡ ಪಾಟೀಲ ಮಾತನಾಡಿ, ‘ದೇಸಿ ಕ್ರೀಡೆಯಾಗಿರುವ ಕೊಕ್ಕೊ ಆಟದಲ್ಲಿ ನಾಗನೂರವು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ತರಬೇತುದಾರ ಈರಣ್ಣ ಹಳಿಗೌಡ ಅವರ ಪರಿಶ್ರಮವು ಶ್ಲಾಘನೀಯ ಎಂದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತಸಹಾಯಕ ಲಕ್ಕಪ್ಪ ಲೋಕೂರೆ, ಬಿಇಒ ಪ್ರಕಾಶ ಹಿರೇಮಠ, ತಾಲ್ಲೂಕು ದೈಹಿಕ ಶಿಕ್ಷಣ ಪರೀಕ್ಷಕ ಎಸ್.ಬಿ. ಹಳಿಗೌಡರ, ಕಾರ್ಯದರ್ಶಿ ಎಸ್.ಬಿ. ಹೊಸಮನಿ, ಪಿ.ಬಿ. ಪಾಟೀಲ, ಬೆಳಗಾವಿ ಜಿಲ್ಲಾ ಕೊಕ್ಕೊ ಅಸೋಸಿಯೇಷನ್ ಜಿಲ್ಲಾ ಘಟಕದ ಅಧ್ಯಕ್ಷ ಗಜಾನನ ಯರಗಣವಿ, ಎಸ್ ಬಿ ಕೇದಾರಿ, ಎಸ್ ಆರ್ ಬಾಗಡೆ ,ಈರಣ್ಣ ಹಳಿಗೌಡರ, ಸುರೇಶ ಸಕ್ರೆಪ್ಪಗೋಳ ಬಸವರಾಜ ಮುತ್ನಾಳ, ಚಿದಾನಂದ ಸಕ್ರೆಪ್ಪಗೋಳ, ತವನಪ್ಪ ಸಗರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.