ADVERTISEMENT

ನೀಟ್: ಬೈಲಹೊಂಗಲದ ನಿಸರ್ಗಗೆ 611ನೇ ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 7:26 IST
Last Updated 8 ಸೆಪ್ಟೆಂಬರ್ 2022, 7:26 IST
ನಿಸರ್ಗ ಯರಗುದ್ದಿ
ನಿಸರ್ಗ ಯರಗುದ್ದಿ   

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಇಲ್ಲಿನ ಏಮ್ ಇಂಟಿಗ್ರೇಟೆಡ್ ಕಾಲೇಜಿನ ವಿದ್ಯಾರ್ಥಿನಿ ನಿಸರ್ಗ ಯರಗುದ್ದಿ ಅವರು 'ನೀಟ್'ನಲ್ಲಿ ದೇಶಕ್ಕೆ 611ನೇ ರ‍್ಯಾಂಕ್ ಪಡೆದಿದ್ದಾರೆ.

ನಿಸರ್ಗ ಅವರು ಇಂಚಲದ ಖಾಸಗಿ ಕಾಲೇಜು ಪ್ರಾಚಾರ್ಯ ಮಲ್ಲೇಶ ಯರಗುದ್ದಿ ಹಾಗೂ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೂಪರಿಂಟೆಂಡೆಂಟ್ ಆಗಿರುವ ಕಲಾವತಿ ಅವರ ಪುತ್ರಿ.

ಪಟ್ಟಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಕಾಲೇಜು ವಿದ್ಯಾಭ್ಯಾಸ ಪೂರ್ಣಗೊಳಿಸಿದ ವಿದ್ಯಾರ್ಥಿನಿ ನಿಸರ್ಗ, ಮಂಗಳೂರಿನ ಒಂದು ಕೋಚಿಂಗ್ ಸೆಂಟರ್ ಹಾಗೂ ಆನ್ ಲೈನ್ ತರಬೇತಿ ಪಡೆದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.