ADVERTISEMENT

ನೇಕಾರರ ಚಿಂತನ–ಮಂಥನ ನಾಳೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 8:04 IST
Last Updated 4 ಡಿಸೆಂಬರ್ 2021, 8:04 IST

ಬೆಳಗಾವಿ: ಜಿಲ್ಲಾ ನೇಕಾರರ ಸಂಘಟನೆಗಳ ಒಕ್ಕೂಟದಿಂದ ಇಲ್ಲಿನ ಖಾನಾಪುರ ರಸ್ತೆಯಲ್ಲಿರುವ ಉದ್ಯಮಬಾಗ್‌ನ ಫೌಂಡ್ರಿ ಕ್ಲಸ್ಟರ್‌ನಲ್ಲಿ ರಾಜ್ಯಮಟ್ಟದ ನೇಕಾರರ ಚಿಂತನ–ಮಂಥನ ಸಂವಾದ ಕಾರ್ಯಕ್ರಮವನ್ನು ಡಿ.5ರಂದು ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ.

ಅಥಣಿ ವಿರಕ್ತಮಠದ ಮಹಾಂತ ದೇವರು ಸಾನ್ನಧ್ಯ ವಹಿಸಲಿದ್ದಾರೆ. ಕರ್ನಾಟಕ ಜವಳಿ ಗಿರಣಿಗಳ ಮಹಾಮಂಡಳದ ಉಪಾಧ್ಯಕ್ಷ ರಾಜಶೇಖರ ಬಿ. ಸೂರಗಾಂವಿ ‘ಪ್ರಚಲಿತ ನೇಕಾರಿಕೆ ವೃತ್ತಿ ಎದುರಿಸುತ್ತಿರುವ ಸವಾಲುಗಳ್ಯಾವುವು ಹಾಗೂ ಪರಿಹಾರಗಳೇನು?’ ಎನ್ನುವ ವಿಷಯ ಮಂಡಿಸಲಿದ್ದಾರೆ. ಸಾಹಿತಿ ಶಂಕರ ಬುಚಡಿ ಅವರು ‘ಹೊರ ರಾಜ್ಯಗಳಲ್ಲಿ ನೇಕಾರರಿಗಿರುವ ಆರ್ಥಿಕ ಮತ್ತು ಶೈಕ್ಷಣಿಕ ಸೌಲಭ್ಯಗಳು ಮತ್ತು ವಿಶೇಷ ಮೀಸಲಾತಿ’ ಕುರಿತು ಮಾತನಾಡಲಿದ್ದಾರೆ. ರಾಜ್ಯ ದೇವಾಂಗ ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರ ಕಲಬುರ್ಗಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಮಾಜದ ಹಿರಿಯರಾದ ಪಾಂಡು ಕಾಮಕರ ಅಧ್ಯಕ್ಷತೆ ವಹಿಸುವರು.

‘ರಾಜ್ಯದಲ್ಲಿ 2 ವರ್ಷಗಳಿಂದ 32 ಮಂದಿ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ, ನಮ್ಮ ಸಮಸ್ಯೆಗಳ ಕುರಿತು ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ಮಾಡುವ ಮತ್ತು ಸರ್ಕಾರದ ಗಮನಸೆಳೆಯುವ ಉದ್ದೇಶದ ಭಾಗವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಜಿಲ್ಲಾ ನೇಕಾರರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಗಜಾನನ ಗುಂಜೇರಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.