ADVERTISEMENT

ಸಿದ್ಧರಾಮೇಶ್ವರ ಶಿವಯೋಗಿಗಳ ರಥಯಾತ್ರೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 15:52 IST
Last Updated 20 ಅಕ್ಟೋಬರ್ 2024, 15:52 IST

ನೇಸರಗಿ: ಸಿದ್ದರಾಮೇಶ್ವರ ಶಿವಯೋಗಿಗಳು ಚುಳಕಿ ಗ್ರಾಮಕ್ಕೆ ಆಗಮಿಸಿ ಶತಮಾನೋತ್ಸವ ಪೂರೈಸಿದ ಹಿನ್ನೆಲೆಯಲ್ಲಿ ಅ.21 ರಿಂದ 24ರ ವರೆಗೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಿದ್ಧರಾಮೇಶ್ವರ ಶಿವಯೋಗಿಗಳ ರಥಯಾತ್ರೆ ಸಂಚರಿಸಲಿದೆ ಎಂದು ಕೆ.ಎನ್.ಮಲ್ಲಾಪುರದ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ ತಿಳಿಸಿದ್ದಾರೆ.

21ರಂದು ಸಮೀಪದ ಮುರ್ಕಿಭಾವಿ ಹಾಗೂ ಮಲ್ಲಾಪುರ ಕೆ.ಎನ್ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥಯಾತ್ರೆ ಉತ್ಸವ ಸಂಚರಿಸಲಿದೆ. ಬಳಿಕ ಕೆ.ಎನ್.ಮಲ್ಲಾಪೂರ ಅವಧೂತ ಗಾಳೇಶ್ವರ ಮಠದಲ್ಲಿ ಕೀರ್ತನೆ, ಭಜನೆ ನಡೆಯಲಿದೆ. ಅ.22, 23, 24ರಂದು ವಿವಿಧೆಡೆ ರಥಯಾತ್ರೆ ಉತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT