ADVERTISEMENT

ನೂತನ ಬಿಷಪ್ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 11:16 IST
Last Updated 20 ಜೂನ್ 2019, 11:16 IST
ಬೆಳಗಾವಿ ಧರ್ಮಪ್ರಾಂತ್ಯದ ನೂತನ ಬಿಷಪ್ ಆಗಿ ಅಧಿಕಾರ ಸ್ವೀಕರಿಸಿದ ಡೆರಿಕ್ ಫರ್ನಾಂಡೀಸ್ ಕೇಕ್‌ ಕತ್ತರಿಸಿದರು
ಬೆಳಗಾವಿ ಧರ್ಮಪ್ರಾಂತ್ಯದ ನೂತನ ಬಿಷಪ್ ಆಗಿ ಅಧಿಕಾರ ಸ್ವೀಕರಿಸಿದ ಡೆರಿಕ್ ಫರ್ನಾಂಡೀಸ್ ಕೇಕ್‌ ಕತ್ತರಿಸಿದರು   

ಬೆಳಗಾವಿ: ಬೆಳಗಾವಿ ಧರ್ಮಪ್ರಾಂತ್ಯದ 6ನೇ ಬಿಷಪ್ ಆಗಿ ಡೆರಿಕ್ ಫರ್ನಾಂಡೀಸ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.

ಕ್ಯಾಂ‍ಪ್‌ನ ಫಾತಿಮಾ ಚರ್ಚ್‌ನಲ್ಲಿ ಕಾರ್ಯಕ್ರಮದಲ್ಲಿ, ಬೆಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪೀಟರ್ ಮಚಾಡೊ ಹಾಗೂ ಇತರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರ ಸಮ್ಮುಖದಲ್ಲಿ ಪದಗ್ರಹಣ ಮಾಡಿದರು. ನಂತರ ನಾಗರಿಕರಿಂದ ಗೌರವ ಸ್ವೀಕರಿಸಿದರು.

ನಂತರ ಮಾತನಾಡಿದ ಅವರು, ‘ಎಲ್ಲರೂ ಪ್ರಾರ್ಥನೆಯ ಮೂಲಕ ದೇವರ ಮಾತುಗಳನ್ನು ಆಲಿಸಬೇಕು. ಅದರಂತೆ ನಡೆದುಕೊಳ್ಳಬೇಕು. ಮಾನವೀಯತೆಯಿಂದ ನಡೆದುಕೊಳ್ಳಬೇಕು. ಸಮಾಜದಿಂದ ಅಪಾರವಾಗಿ ಪಡೆಯುವ ನಾವು ಪ್ರತಿಯಾಗಿ ಕೊಡುಗೆ ನೀಡಬೇಕು. ಜಾತಿ, ಧರ್ಮ ನೋಡದೇ ಎಲ್ಲ ಬಡವರಿಗೂ ನೆರವಾಗಬೇಕು’ ಎಂದು ಹೇಳಿದರು.

ADVERTISEMENT

ಡಿಸಿಪಿ ಸೀಮಾ ಲಾಟ್ಕರ್‌, ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಕುಲಪತಿ ಡಾ.ವಿವೇಕ ಸಾವಜಿ, ಅಂಗಡಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಸಂಜಯ ಪೂಜಾರಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.