ADVERTISEMENT

ಲಸಿಕೆ ವಿತರಣೆ, ಯೋಜನೆ ರೂಪಿಸಿಲ್ಲ: ಶಾಸಕ ದೇಶಪಾಂಡೆ

ಸರ್ಕಾರ ಸಂಪೂರ್ಣ ವಿಫಲ: ಶಾಸಕ ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 0:47 IST
Last Updated 1 ಜೂನ್ 2021, 0:47 IST
ಚನ್ನಮ್ಮನ ಕಿತ್ತೂರು ತಾಲ್ಲೂಕು ಆಡಳಿತಕ್ಕೆ ಕಾಂಗ್ರೆಸ್ ಶಾಸಕ ಆರ್. ವಿ. ದೇಶಪಾಂಡೆ ಔಷಧಿ ಕಿಟ್ ಹಸ್ತಾಂತರಿಸಿದರು
ಚನ್ನಮ್ಮನ ಕಿತ್ತೂರು ತಾಲ್ಲೂಕು ಆಡಳಿತಕ್ಕೆ ಕಾಂಗ್ರೆಸ್ ಶಾಸಕ ಆರ್. ವಿ. ದೇಶಪಾಂಡೆ ಔಷಧಿ ಕಿಟ್ ಹಸ್ತಾಂತರಿಸಿದರು   

ಚನ್ನಮ್ಮನ ಕಿತ್ತೂರು: ‘ಕೋವಿಡ್ 19 ನಿಯಂತ್ರಣ ಮಾಡುವಲ್ಲಿ ರಾಜ್ಯ ಸರ್ಕಾರ ಪೂರ್ಣ ವಿಫಲವಾಗಿದೆ. ಈ ಸರ್ಕಾರ ಸತ್ತು ಹೋಗಿದೆ’ ಎಂದು ಶಾಸಕ ಆರ್. ವಿ. ದೇಶಪಾಂಡೆ ಟೀಕಿಸಿದರು.

ಇಲ್ಲಿಯ ಕೋಟೆ ಆವರಣದಲ್ಲಿ ಸೋಮವಾರ ತಾಲ್ಲೂಕು ಆಡಳಿತಕ್ಕೆ ವೈದ್ಯಕೀಯ ಕಿಟ್ ವಿತರಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಲಸಿಕೆ ನೀಡಿಕೆಯಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಡವಿತು. ಸರಿಯಾದ ವಿತರಣೆಯ ಯೋಜನೆ ರೂಪಿಸಲಿಲ್ಲ. 18ರಿಂದ 44 ರವರೆಗೆ ಲಸಿಕೆ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದರು. ಎಲ್ಲಿ ಲಸಿಕೆ ಪೂರೈಕೆ ಮಾಡಲಾಯಿತು’ ಎಂದು ಪ್ರಶ್ನಿಸಿದರು.

ADVERTISEMENT

ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹನುಮಂತ ಲಂಗೋಟಿ, ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ತಾಲ್ಲೂಕು ವೈದ್ಯಾಧಿಕಾರಿ ಎಸ್. ಎಸ್. ಸಿದ್ದಣ್ಣವರ, ಪಿಎಸ್ಐ ದೇವರಾಜ ಉಳ್ಳಾಗಡ್ಡಿ, ಕೆಪಿಸಿಸಿ ಮಾಜಿ ಸದಸ್ಯ ಶಂಕರ ಹೊಳಿ, ಬಾಬಾಸಾಹೇಬ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರುಣಕುಮಾರ ಬಿಕ್ಕಣ್ಣವರ, ಹನೀಫ್ ಸುತಗಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.