ADVERTISEMENT

ಬೆಳಗಾವಿ: ನೀರು ಪೂರೈಸದ ಅಧಿಕಾರಿಗಳು ತರಾಟೆಗೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2022, 16:25 IST
Last Updated 17 ಅಕ್ಟೋಬರ್ 2022, 16:25 IST
ಬೆಳಗಾವಿಯ ಸದಾಶಿವ ನಗರದ ಆರಿದ್ರಾ ಗಣೇಶ ಮಂದಿರ ಆವರಣದಲ್ಲಿ ಶಾಸಕ ಅನಿಲ ಬೆನಕೆ ಸ್ಥಳೀಯರ ಸಭೆ ನಡೆಸಿದರು
ಬೆಳಗಾವಿಯ ಸದಾಶಿವ ನಗರದ ಆರಿದ್ರಾ ಗಣೇಶ ಮಂದಿರ ಆವರಣದಲ್ಲಿ ಶಾಸಕ ಅನಿಲ ಬೆನಕೆ ಸ್ಥಳೀಯರ ಸಭೆ ನಡೆಸಿದರು   

ಬೆಳಗಾವಿ: ಇಲ್ಲಿನ ಸದಾಶಿವ ನಗರಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡದ ಜಲಮಂಡಳಿ ಹಾಗೂ ಎಲ್‌ ಆ್ಯಂಡ್‌ ಟಿ ಕಂಪನಿ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು.

ಸದಾಶಿವ ನಗರದ ಆರಿದ್ರಾ ಗಣೇಶ ಮಂದಿರ ಆವರಣದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕ ಅನಿಲ ಬೆನಕೆ, ‘ನೀವೂ ತಪ್ಪು ಮಾಹಿತಿ ನೀಡಿ ಜನರ ದಿಕ್ಕು ತಪ್ಪಿಸಬೇಡಿ. ನಾಲ್ಕು ದಿನಗಳಿಗೊಮ್ಮೆ ಸಮರ್ಪಕವಾಗಿ ನೀರು ಪೂರೈಸಿ. ಜನರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ. ಈ ಬಗ್ಗೆ ವರದಿ ಸಲ್ಲಿಸಿ’ ಎಂದು ಸೂಚನೆ ನೀಡಿದರು.

‘ಯುವಸಮೂಹ ಆರೋಗ್ಯಕ್ಕೆ ಒತ್ತು ನೀಡಲು ಅನುಕೂಲವಾಗಲೆಂದು ಇದೇ ಆವರಣದಲ್ಲಿ ವ್ಯಾಯಾಮ ಶಾಲೆ ತೆರೆಯಲಾಗಿದೆ. ಅದರ ಸದುಪಯೋಗ ಪಡಿಸಿಕೊಳ್ಳಿ’ ಎಂದರು. ಜ್ಯೋತಿಬಾ ಪಾಟೀಲ, ವಿನಾಯಕ ಪಾಟೀಲ, ಸಾಗರ ವರ್ಪೆ, ಮನೋಹರ ನಾಯ್ಕ ಇತರರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.